ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇದಾರನಾಥ ದೇಗುಲದ ಬಳಿ ಸೋದರ ಸಹೋದರರಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಬಿಜೆಪಿಯ ಸಂಸದ ವರುಣ್‌ಗಾಂಧಿ ಮಂಗಳವಾರ ಭೇಟಿಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ.
ರಾಹುಲ್‌ಗಾಂಧಿ ಮೂರು ದಿನದಿಂದಲೂ ಕೇದಾರನಾಥದಲ್ಲಿದ್ದಾರೆ. ವರುಣ್‌ಗಾಂಧಿ ತಮ್ಮ ಕುಟುಂಬದೊಂದಿಗೆ ದೇಗುಲಕ್ಕೆ ಮಂಗಳವಾರ ಭೇಟಿ ನೀಡಿದ್ದರು. ಈ ವೇಳೆ ಇಬ್ಬರು ಪರಸ್ಪರ ಭೇಟಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸಾಮಾನ್ಯವಾಗಿ ಸಾರ್ವಜನಿಕವಾಗಿ ಅಪರೂಪಕ್ಕೆ ಒಟ್ಟಿಗೆ ಕಾಣಿಸಿಕೊಳ್ಳುವ ಸಹೋದರರ ಭೇಟಿಯು, ವರುಣ್ ಗಾಂಧಿಯ ರಾಜಕೀಯ ಭವಿಷ್ಯದ ಬಗ್ಗೆ ಕೆಲವು ಊಹಾಪೋಹಗಳನ್ನು ಸೃಷ್ಟಿಸಿವೆ.
ಸಂಜಯ್-ಮನೇಕಾ ಗಾಂಧಿಯ ಪುತ್ರರಾಗಿರುವ ವರುಣ್ ಗಾಂಧಿ ಈಚೆಗೆ ಬಿಜೆಪಿಯ ಪ್ರಮುಖ ಸಭೆಗಳಿಂದ ದೂರ ಉಳಿದಿದ್ದಾರೆ. ಕೆಲವೊಂದು ಬಾರಿ ಪಕ್ಷದ ನಿಲುವಿಗೆ ವಿರುದ್ಧವಾದ ಹೇಳಿಕೆಗಳನ್ನು ನೀಡಿದ್ದಾರೆ. ಹೀಗಾಗಿ ಈ ಭೇಟಿ ರಾಜಕೀಯ ಊಹಾಪೋಹಗಳನ್ನು ಹುಟ್ಟುಹಾಕಿದೆ.