ಇಸ್ರೋ ಖಾತೆಗೆ ಮತ್ತೊಂದು ಸಾಧನೆ: 36 ಉಪಗ್ರಹಗಳೊಂದಿಗೆ ಬಾನಿಗೆ ಹಾರಿದ LVM3-M2 ರಾಕೆಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಸಾಧನೆಯನ್ನು ತನ್ನ ಮುಡುಗೇರಿಸಿಕೊಂಡಿದೆ. ಅತ್ಯಂತ ಭಾರವಾದ LVM3-M2 ರಾಕೆಟ್ ಯಶಸ್ವಿಯಾಗಿ ಬಾನಿಗೆ ಚಿಮ್ಮಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಶನಿವಾರ ಮಧ್ಯರಾತ್ರಿ 12 ಗಂಟೆ 7 ನಿಮಿಷ 40 ಸೆಕೆಂಡುಗಳಿಗೆ ರಾಕೆಟ್ ಉಡಾವಣೆಯಾಗಿದ್ದು, ಈ ರಾಕೆಟ್ ಸುಮಾರು 8,000 ಕೆಜಿ ತೂಕದ ಉಪಗ್ರಹಗಳನ್ನು ಹೊತ್ತೊಯ್ಯುವ ಸಾಮರ್ಥ್ಯವಿನ್ನು ಹೊಂದಿದ್ದು ಆರು ಟನ್ ತೂಕವಿದು. ಇಷ್ಟು ತೂಕದ ಎಲ್‌ವಿಎಂ3-ಎಂ2 ರಾಕೆಟ್ ಉಡಾವಣೆ ಮಾಡಿರುವುದು ಇಸ್ರೋ ಇತಿಹಾಸದಲ್ಲಿ ಇದೇ ಮೊದಲು.

ಈ ಮಿಷನ್ 36ವನ್‌ವೆಬ್ ಉಪಗ್ರಹಗಳನ್ನು ಈ ರಾಕೆಟ್ ಹೊತ್ತೊಯ್ದಿದೆ. GLLV-MK3 ಎಂದು ಕರೆಯಲ್ಪಡುವ ರಾಕೆಟ್ ಅನ್ನು ಸ್ವಲ್ಪ ಮಟ್ಟಿಗೆ ಆಧುನೀಕರಿಸಿ ಅದಕ್ಕೆ M3-M2 ಎಂದು ಹೆಸರಿಸಲಾಗಿದೆ. ISRO ರಾಕೆಟ್ LVM3-M2 ಹೊತ್ತೊಯ್ಯುವ ಈ ಉಪಗ್ರಹಗಳು ಲಂಡನ್ ಮೂಲದ ಸಂವಹನ ಕಂಪನಿಯಾದ ʻವನ್‌ವೆಬ್‌ʼ ಗೆ ಸೇರಿವೆ. ಭಾರತದ ಭಾರತಿ ಎಂಟರ್‌ಪ್ರೈಸಸ್ ಇದರಲ್ಲಿ ಪ್ರಮುಖ ಹೂಡಿಕೆದಾರರಾಗಿದ್ದಾರೆ.

LVM3 ಉಡಾವಣೆ ನಂತರ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಮಾತನಾಡಿ, ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ಉಡಾವಣೆ ಯಶಸ್ವಿಯಾಗಿದೆ ಮತ್ತು ಉಪಗ್ರಹಗಳ ಪ್ರತ್ಯೇಕತೆಯನ್ನು ಪರಿಪೂರ್ಣವಾಗಿ ಮಾಡಲಾಗಿದೆ. ಎಲ್ಲಾ ಉಪಗ್ರಹಗಳು ನಿಖರವಾದ ಕಕ್ಷೆಯಲ್ಲಿವೆ ಎಂದರು. LVM-3 ಅನ್ನು ಪ್ರಾರಂಭಿಸಲು ನಮ್ಮ ಮೇಲೆ ವಿಶ್ವಾಸವಿಟ್ಟ ಒನ್‌ವೆಬ್ ತಂಡಕ್ಕೆ ಸೋಮನಾಥ್ ಧನ್ಯವಾದ ಅರ್ಪಿಸಿದರು. ಮಿಷನ್ ಯಶಸ್ವಿಯಾಗಿರುವ ಇಸ್ರೋ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!