ದಿನಭವಿಷ್ಯ | ನಿಮಗೆ ಹರ್ಷ ತರುವಂತಹ ಬೆಳವಣಿಗೆ ಸಂಭವಿಸುವುದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಮೇಷ
ಇಂದು ಯಶಸ್ವಿ ದಿನ. ದೈವಾನುಕೂಲವಿದೆ. ನಿಮ್ಮ ಮೆಚ್ಚಿನ ವಿಷಯದಲ್ಲಿ ಪ್ರಗತಿ ಸಾಧಿಸುವಿರಿ.ಆಪ್ತರಿಂದ ಪ್ರಯೋಜನ ಪಡೆಯುವಿರಿ.

ವೃಷಭ
ಕಠಿಣ ಶ್ರಮ ಪಡುತ್ತೀರಿ. ಆದರೆ ನಿರೀಕ್ಷಿತ ಫಲ ದೊರಕದೆ ಹತಾಶೆ ಹೆಚ್ಚುವುದು. ಇತರರ ಮೇಲೆ ಅಸಹನೆ ಕಾರಲು ಹೋಗದಿರಿ.ಸಹನೆ ಇರಲಿ.

ಮಿಥುನ
ಕುಟುಂಬಕ್ಕೆ ಸಂಬಂಧಿಸಿದ ನಿರ್ಧಾರವನ್ನು ಸಮಾಲೋಚಿಸಿ ತೆಗೆದುಕೊಳ್ಳಿ. ಇದರಿಂದ ಭಿನ್ನಾಭಿಪ್ರಾಯ  ನಿವಾರಣೆ.

ಕಟಕ
ದಿನದ ಮೊದಲಾರ್ಧ ಗೊಂದಲ  ಗಡಿಬಿಡಿ ಯಲ್ಲೇ ಕಳೆಯುವಿರಿ. ಆದರೆ ಉತ್ತರಾರ್ಧದಲ್ಲಿ ಎಲ್ಲವೂ ಸರಿಸ್ಥಿತಿಗೆ ಬರುವುದು. ಶಾಂತಿ ನೆಲೆಸುವುದು.

ಸಿಂಹ
ಮಿಶ್ರ ಫಲದ ದಿನ. ಕೆಲ ವಿಷಯಗಳು ಮಾನಸಿಕ ತುಮುಲ ಸೃಷ್ಟಿಸುತ್ತವೆ. ಭವಿಷ್ಯದ ಬಗ್ಗೆ ಆತಂಕ. ಕೌಟುಂಬಿಕ ಪರಿಸರದಲ್ಲಿ ನೆಮ್ಮದಿ, ಸಂತೋಷ.

ಕನ್ಯಾ
ಇಂದು ದಿನದ ಬಹು ಕಾಲ ಮನೆಯಲ್ಲೇ ಕುಳಿತು ಕಳೆಯುವ ಅವಕಾಶ. ಭವಿಷ್ಯಕ್ಕೆ ಯೋಜನೆ ರೂಪಿಸಲು ಇದನ್ನು ಉಪಯೋಗಿಸಿ.

ತುಲಾ
ವೃತ್ತಿಯಲ್ಲಿ ಉನ್ನತ ಸಾಧನೆ. ಇತರರ ಅವಲಂಬನೆ ಬಿಟ್ಟು ಆತ್ಮ ನಿರ್ಭರತೆ ಸಾಧಿಸುವಿರಿ. ಕೌಟುಂಬಿಕವಾಗಿ ಸಾಮರಸ್ಯ ಮತ್ತು ಸಹಕಾರ.

ವೃಶ್ಚಿಕ
ಉದ್ಯಮದಲ್ಲಿ ಯಶಸ್ಸು. ಹಣದ ವಿಷಯದಲ್ಲಿ ತೃಪ್ತಿಕರ ಬೆಳವಣಿಗೆ. ದುಬಾರಿ ವಸ್ತು ಖರೀದಿಗೆ ತುಡಿತ ಉಂಟಾದೀತು. ಆರೋಗ್ಯ ಸ್ಥಿರ.

ಧನು
ಮನಸ್ಸಿನ ನೆಮ್ಮದಿ ಕೆಡಿಸುವ ಕೆಲವು ಚಿಂತನೆಗಳನ್ನು ಬಿಟ್ಟುಬಿಡಿ. ನೀವು ತಿಳಕೊಂಡಷ್ಟು ಪರಿಸ್ಥಿತಿ ಪ್ರತಿಕೂಲವಾಗಿಲ್ಲ. ಆಶಾವಾದವಿರಲಿ.

ಮಕರ
ಹಿತೈಷಿಗಳ ಸಲಹೆಗೆ ಕಿವಿ ಕೊಡಿ.ಅದರಿಂದ ನಿಮಗೆ ಒಳಿತಾದೀತು. ಹಣದ ವಿಷಯದಲ್ಲಿ ರಿಸ್ಕ್ ತೆಗೆದುಕೊಳ್ಳಬೇಡಿ. ಎಚ್ಚರಿಕೆಯಿರಲಿ.

ಕುಂಭ
ನಿಮ್ಮ ನಿರೀಕ್ಷೆ ಮಿತಿ ಯಲ್ಲಿರಲಿ. ಅತಿಯಾದ ನಿರೀಕ್ಷೆ ನಿರಾಶೆಗೆ ಕಾರಣವಾದೀತು. ಆತ್ಮೀಯರು ಮುಖ್ಯ ವಿಷಯದಲ್ಲಿ ಕೈ ಕೊಟ್ಟಾರು.

ಮೀನ
ನಿಮಗೆ ಹರ್ಷ ತರುವಂತಹ ಬೆಳವಣಿಗೆ ಸಂಭವಿಸುವುದು.ಮುಖ್ಯವಾಗಿ ಆರ್ಥಿಕ ವಿಚಾರದಲ್ಲಿ ಪೂರಕ ಬೆಳವಣಿಗೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!