ಪಂತ್‌ಗೆ ಮತ್ತೊಂದು ಶಸ್ತ್ರಚಿಕಿತ್ಸೆ: ವಿಶ್ವಕಪ್‌ನಿಂದ ಔಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭೀಕರ ಅಪಘಾತಕ್ಕೊಳಗಾದ ಕ್ರಿಕೆಟರ್ ರಿಷಬ್ ಪಂತ್‌ಗೆ ಮತ್ತೊಂದು ಶಸ್ತ್ರಚಿಕಿತ್ಸೆ ಆಗಬೇಕಿದ್ದು, ವಿಶ್ವಕಪ್‌ನಲ್ಲಿ ಆಡುವುದು ಬಹುತೇಕ ಅನುಮಾನವಿದೆ.

ಟೀಂ ಇಂಡಿಯಾ ಈ ವರ್ಷ ತನ್ನದೇ ನೆಲದಲ್ಲಿ ವಿಶ್ವಕಪ್ ಆಡಬೇಕಿದ್ದು, ರಿಷಬ್ ಪಂತ್ ಅಷ್ಟರೊಳಗೆ ಮತ್ತೆ ಫಿಟ್ ಆಗೋದು ಡೌಟ್ ಎನ್ನಲಾಗಿದೆ. ರಿಷಬ್‌ಗೆ ಇನ್ನೆರಡು ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ, ರಿಕವರಿ ಸಮಯ ಹೆಚ್ಚಿದೆ.

ಈಗಾಗಲೇ ಪಂತ್‌ಗೆ ಕಾಲಿನ ಶಸ್ತ್ರಚಿಕಿತ್ಸೆ ಮಾಡಲಾಗಿದೆ, ಇದರ ನಂತರವೂ ಮತ್ತೊಂದು ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಆಪರೇಷನ್‌ಗೆ ಆರು ವಾರಗಳು ಕಾಯಬೇಕಿದೆ. ಲಿಗಮೆಂಟ್ ಟೇರ್‌ನಿಂದ ಸಮಸ್ಯೆ ಅನುಭವಿಸುತ್ತಿರುವ ಪಂತ್ ಮೈದಾನಕ್ಕೆ ಮರಳುವ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆದರೆ ಬಿಸಿಸಿಐ ಅನ್ವಯ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್ ಸರಣಿಯಲ್ಲಿ ಪಂತ್ ಕಣಕ್ಕಿಳಿಯುವುದು ಅಸಾಧ್ಯವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!