ಮತ್ತೊಂದು ಭೀಕರ ಅಪಘಾತ: 2 ರೈಲುಗಳು ಪರಸ್ಪರ ಡಿಕ್ಕಿ, ಹಳಿ ತಪ್ಪಿದ ಮೂರು ಬೋಗಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಪದ್ಮಪುಕುರ್ ರೈಲ್ವೆ ನಿಲ್ದಾಣದ ಬಳಿ ಎರಡು ರೈಲುಗಳು ಪರಸ್ಪರ ಡಿಕ್ಕಿ ಹೊಡೆದು ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ನಡೆದಿದೆ.

ಹೌರಾದ ಸಂತ್ರಗಚಿ ಮತ್ತು ಶಾಲಿಮಾರ್ ನಿಲ್ದಾಣಗಳ ನಡುವೆ ಈ ದುರ್ಘಟನೆ ಸಂಭವಿಸಿದ್ದು, ಸಂತ್ರಗಚಿ-ತಿರುಪತಿ ಎಕ್ಸ್‌ಪ್ರೆಸ್ (ಖಾಲಿ) ಸಂತ್ರಗಚಿಯಿಂದ ಶಾಲಿಮಾರ್‌ಗೆ ಹೋಗುತ್ತಿದ್ದಾಗ ಸೈಡ್ ಲೈನ್‌ನಲ್ಲಿ ಎಂಜಿನ್ ಎರಡು ಬೋಗಿಗಳನ್ನು ಎಳೆಯುತ್ತಿತ್ತು. ಈ ವೇಳೆ ಎರಡೂ ರೈಲುಗಳು ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಇದರಿಂದಾಗಿ ಒಟ್ಟು 3 ಬೋಗಿಗಳು ಹಳಿತಪ್ಪಿವೆ ಎಂದು ವರದಿಯಾಗಿದೆ.

ಈ ಅವಘಡದಿಂದಾಗಿ ಸಾಲಿಮಾರ್-ಸಂತ್ರಗಚ್ಚಿ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದೆ. ಅಪಘಾತದ ಕಾರಣ ಎರಡು ರೈಲುಗಳ ಸಮಯವನ್ನು ಬದಲಾಯಿಸಲಾಗಿದೆ. ಅವಘಡದಿಂದ ತಿರುಪತಿ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳು ಮತ್ತು ಇನ್ನೊಂದು ರೈಲಿನ ಒಂದು ಬೋಗಿ ಹಳಿತಪ್ಪಿವೆ. ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಆಗಮಿಸಿದ್ದು, ಹಳಿತಪ್ಪಿದ ಬೋಗಿಗಳನ್ನು ಹೊರತೆಗೆಯುವ ಕಾರ್ಯ ಆರಂಭವಾಗಿದೆ. ಈ ಬಗ್ಗೆ ರೈಲ್ವೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ರೈಲುಗಳ ಕಾರ್ಯಾಚರಣೆಯನ್ನು ಸಾಮಾನ್ಯಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 

- Advertisement - Ply

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!