ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿ ಜಿಲ್ಲೆಯಲ್ಲಿ ಇಂದು ವಂದೇ ಭಾರತ್ ರೈಲು ಉದ್ಘಾಟನೆ ಮಾಡುತ್ತೇನೆ. ಕೆಲ ದಿನಗಳ ನಂತರ ಮತ್ತೊಂದು ರೈಲು ಬೆಳಗಾವಿಗೆ ಬರಲಿದೆ ಎಂದು ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಹೇಳಿದರು.
ಉದ್ಘಾಟನೆಗೂ ಮುನ್ನ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಪ್ರಧಾನಿ ನರೇಂದ್ರ ಮೋದಿ 7 ರೈಲು ಉದ್ಘಾಟನಾ ಮಾಡಲಿದ್ದಾರೆ. ಸಂಜೆ ನಾಲ್ಕು ಗಂಟೆಗೆ ಕೊಲ್ಹಾಪುರ-ಪುಣೆ ರೈಲು ಉದ್ಘಾಟನೆ ಮಾಡುತ್ತೇನೆ. ಬೆಳಗಾವಿಯಲ್ಲಿ ಪುಣೆಯಿಂದ ವಂದೇ ಭಾರತ್ ರೈಲು ರಿಸಿವ್ ಮಾಡುತ್ತೇನೆ ಎಂದರು.