ಬ್ರಿಜ್ ಭೂಷಣ್ ಶರಣ್ ಸಿಂಗ್ ಗೆ ಮತ್ತೊಂದು ಸಂಕಷ್ಟ: ಅಕ್ರಮ ಗಣಿಗಾರಿಕೆ ತನಿಖೆಗೆ ಎನ್‍ಜಿಟಿ ಪೀಠ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಗೆ (Brij Bhushan Sharan Singh)ಮತ್ತೊಂದು ಸಂಕಷ್ಟ ಎದುರಾಗಿದ್ದು, ಗೊಂಡಾದಲ್ಲಿದಲ್ಲಿರುವ ಕಂಪನಿಯು ಅಕ್ರಮ ಮರಳು ಗಣಿಗಾರಿಕೆ (Illegal Mining) ಮತ್ತು ಖನಿಜಗಳ ಸಾಗಾಣಿಕೆ ನಡೆಸಿ ಸರಯು ನದಿಗೆ ಹಾನಿ ಉಂಟು ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.

ಇದೀಗ ಈ ಬಗ್ಗೆ ತನಿಖೆ ನಡೆಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶಿಸಿದೆ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಪ್ರಧಾನ ಪೀಠವು (National Green Tribunal) ಅರಣ್ಯ ಸಚಿವಾಲಯ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಸ್ವಚ್ಛ ಗಂಗಾ ರಾಷ್ಟ್ರೀಯ ಮಿಷನ್, ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಗೊಂಡ ಜಿಲ್ಲಾ ಮ್ಯಾಜಿಸ್ಟ್ರೇಟ್‍ನ್ನು ಒಳಗೊಂಡ ಜಂಟಿ ಸಮಿತಿಯನ್ನು ರಚಿಸಿದೆ. ಒಂದು ವಾರದೊಳಗೆ ಸಮಿತಿಯ ಸಭೆ ನಡೆಸುವಂತೆ ಸೂಚಿಸಿದೆ. ಬಳಿಕ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ.

ನ್ಯಾಯಮೂರ್ತಿ ಅರುಣ್ ಕುಮಾರ್ ತ್ಯಾಗಿ ಮತ್ತು ಡಾ. ಎ ಸೆಂಥಿಲ್ ವೇಲ್ ಅವರನ್ನೊಳಗೊಂಡ ದೆಹಲಿಯ ಎನ್‍ಜಿಟಿಯ ಪ್ರಧಾನ ಪೀಠವು ನಿರ್ದೇಶನ ನೀಡಿದೆ.

ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಕಂಪನಿ ಮಜರತ್, ಜೈತ್‍ಪುರ, ನವಾಬ್‍ಗಂಜ್, ತಹಸಿಲ್ ತರಬ್‍ಗಂಜ್ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದೆ. ಪ್ರತಿದಿನ ಓವರ್‌ಲೋಡ್ ಮಾಡಿದ 700 ಕ್ಕೂ ಹೆಚ್ಚು ಟ್ರಕ್‍ಗಳ ಮೂಲಕ ಅಕ್ರಮವಾಗಿ 20 ಲಕ್ಷ ಕ್ಯೂಬಿಕ್ ಮೀಟರ್ ಅಳತೆಯ ಮರಳು ಮತ್ತು ಖನಿಜಗಳನ್ನು ಸಾಗಿಸಲಾಗಿದೆ. ಇದರಿಂದ ಪಟ್ಪರ್ ಗಂಜ್ ಸೇತುವೆ ಮತ್ತು ರಸ್ತೆಗೆ ಹಾನಿಯಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಸಮಿತಿಯು ಎರಡು ತಿಂಗಳೊಳಗೆ ಈ ಬಗ್ಗೆ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!