ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿವೃತ್ತ ಡಿಜಿ, ಐಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣ ಮತ್ತಷ್ಟು ತಿರುವು ಪಡೆದುಕೊಳ್ಳುತ್ತಿದ್ದು, ಘಟನೆಗೆ ಸಂಬಂಧಿಸಿ ಅವರ ಪತ್ನಿ ಪಲ್ಲವಿಯನ್ನು ವಶಕ್ಕೆ ಪಡೆದಿದ್ದ ಪೊಲೀಸರು ಈಗ ಮಗಳು ಕೃತಿಯನ್ನು ಕೂಡಾ ತಮ್ಮ ವಶಕ್ಕೆ ಪಡೆದಿದ್ದಾರೆ.
ಓಂ ಪ್ರಕಾಶ್ ಕೊಲೆ ನಡೆದ ವೇಳೆ ಮನೆಯಲ್ಲಿ ಓಂ ಪ್ರಕಾಶ್, ಅವರ ಪತ್ನಿ ಹಾಗೂ ಮಗಳು ಮೂವರೇ ಇದ್ದ ಹಿನ್ನೆಲೆಯಲ್ಲಿ ಅನುಮಾನಗಳು ಇನ್ನಷ್ಟು ದಟ್ಟವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರಿಬ್ಬರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಕೊಲೆ ಕೃತ್ಯದ ಹಿಂದೆ ಕೌಟುಂಬಿಕ ಕಲಹ ಹಾಗೂ ಆಸ್ತಿ ವಿಚಾರ ಇರುವ ಮಾಹಿತಿ ಲಭ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಮಗಳು ಇಬ್ಬರೂ ಸೇರಿಕೊಂಡು ಕೊಲೆ ಮಾಡಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ.
ಇನ್ನೊಂದು ಮೂಲದ ಪ್ರಕಾರ ಪೊಲೀಸ್ ಅಧಿಕಾರಿಗಳ ಜೊತೆ ಮನೆಯಲ್ಲಿ ಹೆಂಡತಿಯ ಟಾರ್ಚರ್ ತಡೆದುಕೊಳ್ಳುವುದಕ್ಕೆ ಆಗುತ್ತಿಲ್ಲವೆಂದು ಓಂ ಪ್ರಕಾಶ್ ಹೇಳಿಕೊಂಡಿದ್ದರು ಎಂಬ ಅಂಶವೂ ಬಯಲಿಗೆ ಬಂದಿದೆ.
ಓಂ ಪ್ರಕಾಶ್ ಕುಟುಂಬ ಬೆಂಗಳೂರಿನ ಹೆಚ್‌ಎಸ್‌ಆರ್ ಬಡಾವಣೆಯ ೩ ಮಹಡಿಯ ಮನೆಯಲ್ಲಿ ವಾಸವಾಗಿದೆ. ಕೆಳ ಮಹಡಿಯಲ್ಲಿ ಓಂ ಪ್ರಕಾಶ್ ಮತ್ತು ಪತ್ನಿ ವಾಸವಾಗಿದ್ದಾರೆ.