ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿದಿದೆ. ರಾಜಧಾನಿ ಪಾಟ್ನಾದಲ್ಲಿ ನಿರ್ಮಾಣ ಹಂತದ ಸೇತುವೆಯ ಒಂದು ಭಾಗ ಕುಸಿದಿದೆ. ಭಾನುವಾರ ರಾತ್ರಿ ನಡೆದ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ನಿರ್ಮಾಣ ಹಂತದಲ್ಲಿರುವ ಸೇತುವೆಯ ಭಾಗವು ಬಿಹಾರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (BSRDCL) ನಿರ್ವಹಿಸುತ್ತಿರುವ ಭಕ್ತಿಯಾರ್‌ಪುರ-ತಾಜ್‌ಪುರ ಗಂಗಾ ಮಹಾಸೇತುವಿನ ಭಾಗವಾಗಿದೆ. ಗರ್ಡರ್‌ನ ಬೇರಿಂಗ್‌ಗಳನ್ನು ಬದಲಾಯಿಸುವಾಗ ಮತ್ತು ಪಿಲ್ಲರ್‌ಗೆ ಗರ್ಡರ್ ಹಾಕುವಾಗ ಒಂದು ಭಾಗ ಕೆಳಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಬಿಎಸ್‌ಆರ್‌ಡಿಸಿಎಲ್ ಮುಖ್ಯ ಜನರಲ್ ಮ್ಯಾನೇಜರ್ ಪ್ರವೀಣ್ ಚಂದ್ರ ಗುಪ್ತಾ ಅವರು, ‘ಬೇರಿಂಗ್ ಬದಲಾಯಿಸುವುದು ವಾಡಿಕೆಯ ಕಾರ್ಯವಿಧಾನವಾಗಿದೆ. ಯಾವುದೇ ಸಾವು ನೋವು ಸಂಭವಿಸಿದ ಸುದ್ದಿ ಇಲ್ಲ. ಕಾಮಗಾರಿಯನ್ನು ಪರಿಶೀಲಿಸುತ್ತೇವೆ ಎಂದಿದ್ದಾರೆ.
2011ರ ಜೂನ್ ನಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 5.57 ಕಿಮೀ ಉದ್ದದ ಭಕ್ತಿಯಾರ್‌ಪುರ-ತಾಜ್‌ಪುರ ಗಂಗಾ ಮಹಾಸೇತು ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಆ ಸಮಯದಲ್ಲಿ ಈ ಯೋಜನೆಯ ಒಟ್ಟು ವೆಚ್ಚ 1,602.74 ಕೋಟಿ ರೂಪಾಯಿ ಆಗಿತ್ತು. ಈ ಯೋಜನೆ ಪೂರ್ಣಗೊಂಡ ನಂತರ, ಸಮಸ್ತಿಪುರದ ರಾಷ್ಟ್ರೀಯ ಹೆದ್ದಾರಿ 28 ಮತ್ತು ಪಾಟ್ನಾದ ರಾಷ್ಟ್ರೀಯ ಹೆದ್ದಾರಿ 31 ಅನ್ನು ಸಂಪರ್ಕಿಸಬಹುದು.