ದಿಗಂತ ವರದಿ ಅಂಕೋಲಾ :
ತಾಲೂಕಿನಲ್ಲಿ ಶಂಕಿತ ಡೆಂಗ್ಯೂ ಜ್ವರಕ್ಕೆ ಇನ್ನೊಂದು ಬಲಿಯಾಗಿದೆ. ಶಾಂತಾದುರ್ಗಾ ದೇವಸ್ಥಾನದ ಹತ್ತಿರದ ನಿವಾಸಿ ನಿಶಾಂತ ದೇವಿದಾಸ ನಾರ್ವೇಕರ ಮೃತ ದುರ್ದೈವಿಯಾಗಿದ್ದಾರೆ.
ಇತ್ತೀಚೆಗೆ ತೀವ್ರ ಜ್ವರದಿಂದ ಬಳಲುತ್ತಿದ್ದಇವರನ್ನು ಖಾಸಗಿ ಕ್ಲಿನಿಕ್ ಒಂದರಲ್ಲಿ ತಪಾಸಣೆ ನಡೆಸಿ ಕಾರವಾರ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ರಾತ್ರಿ ಅವರು ಮೃತಪಟ್ಟಿದ್ದಾರೆ.
ಇವರಿಗೆ ಬಾಧಿಸಿದ್ದ ಜ್ವರ ಡೆಂಗ್ಯೂ ಎಂದು ಹೇಳಲಾಗಿದ್ದರೂ ಆರೋಗ್ಯ ಇಲಾಖೆಯಿಂದ ಸಾವಿನ ನಿಖರ ಕಾರಣ ತಿಳಿಸಬೇಕಿದೆ. ವೆಲ್ಡಿಂಗ್ ಅಂಗಡಿ ನಡೆಸುತ್ತಿದ್ದ ಇವರು ಗೋಮಾಂತಕ ಸಂಘದ ಸಕ್ರೀಯ ಸದಸ್ಯರು. ಪತ್ನಿ, ಇಬ್ಬರು ಮಕ್ಕಳನ್ನು ಬಿಟ್ಟಗಲಿದ್ದಾರೆ.
ತಾಲೂಕಿನ ಭಾವಿಕೇರಿಯ ಹರೇರಾಮ ಭಟ್ಟ ಶಂಕಿತ ಡೆಂಗ್ಯೂ ಜ್ವರಕ್ಕೆ ಬಲಿಯಾದ ಬೆನ್ನಿಗೇ, ಆಗಿರುವ ಇನ್ನೊಂದು ಸಾವು ಆತಂಕಕ್ಕೆ ಕಾರಣವಾಗಿದೆ. ಸದಾ ಜನರೊಂದಿಗೆ ಸಾಮಾಜಿಕ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದ ನಿಶಾಂತನ ಅಕಾಲಿಕ ಸಾವು ಜನರಲ್ಲಿ ನೋವು ತಂದಿದೆ. ಇವರ ಅಕಾಲಿಕ ನಿಧನಕ್ಕೆ ಪ್ರಮುಖರಾದ ಭಾಸ್ಕರ ನಾರ್ವೇಕರ್, ನ್ಯಾಯವಾದಿ ಸುಭಾಸ ನಾರ್ವೇಕರ್ ಮತ್ತಿತರು ಶೋಕ ವ್ಯಕ್ತಪಡಿಸಿದ್ದಾರೆ.