Thursday, March 30, 2023

Latest Posts

ದೇಶದಲ್ಲಿ ಮತ್ತೊಂದು ವೈರಸ್‌ ಕಾಟ: H3N2 ಜೊತೆ ಹೆಚ್ಚುತ್ತಿದೆ ಹಂದಿ ಜ್ವರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಎಚ್‌3ಎನ್‌2 ವೈರಸ್‌ ಹೆಚ್ಚುತ್ತಿದ್ದು, ಇದರ ನಡುವೆ ಇದೀಗಎಚ್‌1ಎನ್‌1 ಕೂಡ ಹೆಚ್ಚಳವಾಗುತ್ತಿದೆ.

H3N2 ಇನ್‌ಫ್ಲುಯೆಂಜಾ ವೈರಸ್ ಸೋಂಕು ವೇಗವಾಗಿ ಹರಡುತ್ತಿದೆ. ಈ ವೈರಸ್‌ನಿಂದ ದೇಶದಲ್ಲಿ ಜೀವಗಳು ಬಲಿಯಾಗುತ್ತಿದೆ.
ಈಗ ಇನ್‌ಫ್ಲುಯೆಂಜಾ ಎ ಸಬ್‌ಟೈಪ್ H3N2 ವೈರಸ್ ಭಾರತದಲ್ಲಿ ಪ್ರಬಲ ವೈರಸ್ ಆಗಿ ಹಬ್ಬುತ್ತಿರುವ ಜೊತೆಗೆ, ಹಂದಿ ಜ್ವರ ಅಥವಾ H1N1 ವೈರಸ್ ಪ್ರಕರಣಗಳು ದೇಶಾದ್ಯಂತ ವೇಗವಾಗಿ ಹೆಚ್ಚುತ್ತಿವೆ ಎಂದು ಮಂಗಳವಾರದ (ಮಾರ್ಚ್ 14) ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತೋರಿಸಿವೆ. ಅಂಕಿ ಅಂಶಗಳ ಪ್ರಕಾರ, 2023ರನೇ ಸಾಲಿನಲ್ಲಿ ಜ.1ರಿಂದ ಫೆಬ್ರವರಿ ಅಂತ್ಯದವರೆಗೆ ಒಟ್ಟು 955 ಎಚ್1ಎನ್1 ಸೋಂಕುಗಳು ವರದಿಯಾಗಿವೆ ಎಂದು ತಿಳಿದುಬಂದಿದೆ.

ತಮಿಳುನಾಡು (545), ಮಹಾರಾಷ್ಟ್ರ (170), ಗುಜರಾತ್ (74), ಕೇರಳ (72), ಮತ್ತು ಪಂಜಾಬ್ (28) ನಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮಾರ್ಚ್ ಅಂತ್ಯದಿಂದ ಈ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆಯಿದೆ ಮತ್ತು ಸಂಖ್ಯೆಗಳನ್ನು ಟ್ರ್ಯಾಕ್ ಮಾಡಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಸಚಿವಾಲಯ ಹೇಳಿದೆ.

H3N2 ಮತ್ತು H1N1 ಸೋಂಕುಗಳೆರಡೂ ಕೋವಿಡ್-19 ನಂತೆಯೇ ರೋಗಲಕ್ಷಣಗಳನ್ನು ಹೊಂದಿವೆ. ಇನ್ನು ಕಳೆದ ಮೂರ್ನಾಲ್ಕು ವರ್ಷಗಳಿಂದ ಲಕ್ಷಾಂತರ ಜನರ ಸಾವಿಗೆ ಕಾರಣವಾದ ಕೋವಿಡ್‌-19 ವೈರಸ್‌ನ ನಂತರ ಕಂಡುಬರುತ್ತಿರುವ ಅತ್ಯಂತ ಅಪಾಯಕಾರಿ ವೈರ್ಸ್‌ ಇದಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!