ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆ ಬೆನ್ನಲ್ಲೇ ಇದೀಗ ಬಸ್ ಪಾಸ್ ದರವೂ ಏರಿಕೆಯಾಗಿದೆ. ಕೆಲ ದಿನಗಳ ಹಿಂದೆಷ್ಟೇ ನಾಲ್ಕೂ ನಿಗಮಗಳ ಬಸ್ ಟಿಕೆಟ್ ದರ ಶೇ. 15 ರಷ್ಟು ಏರಿಕೆ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪಾಸ್ ದರವನ್ನೂ ಏರಿಕೆ ಮಾಡಿದೆ. ದರ ಏರಿಕೆ ಬಿಸಿ ಪ್ರಯಾಣಿಕರಿಗೆ ತಟ್ಟಿದೆ. ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಪಾಸ್ ದರ ಏರಿಕೆ ಮಾಡಿ ಬಿಎಂಟಿಸಿ ಇಂದಿನಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.
- ಸಾಮಾನ್ಯ ದಿನದ ಪಾಸು 70 ರೂಪಾಯಿಯಿಂದ 80 ರೂ. ಏರಿಕೆ
- ವಾರದ ಪಾಸು 300 ರೂಪಾಯುಯಿಂದ 350 ರೂ. ಏರಿಕೆ
- ಮಾಸಿಕ ಪಾಸು 1050 ರೂಪಾಯಿಯಿಂದ 1200 ರೂ. ಏರಿಕೆ
- ನೈಸ್ ರಸ್ತೆಯ ಟೋಲ್ ಶುಲ್ಕ ಸೇರಿ 2200 ರೂ. 2350 ರೂ. ಏರಿಕೆಯಾಗಿದೆ.
- ವಜ್ರ ಬಸ್ಸಿನ ದಿನದ ಪಾಸು 120 ರೂಪಾಯಿಯಿಂದ 140 ರೂ. ಏರಿಕೆ
- ವಜ್ರ ಬಸ್ಸಿನ ಮಾಸಿಕ ಪಾಸು 1800 ರೂಪಾಯಿಯಿಂದ 2000 ರೂ. ಏರಿಕೆ
- ವಾಯುವಜ್ರ ಬಸ್ಸಿನ – 3755 ರಿಂದ 4000 ರೂ ಏರಿಕೆ
- ವಿದ್ಯಾರ್ಥಿ ವಜ್ರ ಮಾಸಿಕ ಪಾಸು- 1200 ರಿಂದ 1400 ರೂ ಗೆ ಏರಿಕೆಯಾಗಿದೆ.