ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಬಿಗ್ ಬಾಸ್’, ‘ಲಕ್ಷ್ಮಿ ನಿವಾಸ’ ಖ್ಯಾತಿಯ ಚಂದನಾ ಅನಂತಕೃಷ್ಣ ಅಭಿಮಾನಿಗಳಿಗೆ ಶುಭ ಸುದ್ದಿ ಕೊಟ್ಟಿದ್ದಾರೆ. ಉದ್ಯಮಿ ಪ್ರತ್ಯಕ್ಷ್ ಎಂಬುವವರ ಜೊತೆ ಇದೇ ನ.28ಕ್ಕೆ ಹಸೆಮಣೆ ಏರಲು ನಟಿ ಸಜ್ಜಾಗಿದ್ದಾರೆ.
ಇದೀಗ ಭಾವಿ ಪತಿ ಪ್ರತ್ಯಕ್ಷ್ ಜೊತೆಗಿನ ಚಂದನಾ ಫೋಟೋ ರಿವೀಲ್ ಆಗಿದೆ. ಈ ಜೋಡಿಯನ್ನು ನೋಡಿ ನಟಿಯ ಫ್ಯಾನ್ಸ್ ಶುಭಕೋರುತ್ತಿದ್ದಾರೆ. ಕುಟುಂಬಸ್ಥರು ನಿಶ್ಚಯಿಸಿದ ಮದುವೆ ಇದಾಗಿದ್ದು, ಉದ್ಯಮಿ ಪ್ರತ್ಯಕ್ಷ್ ಜೊತೆ ಇದೇ ನವೆಂಬರ್ 28ಕ್ಕೆ ಬೆಂಗಳೂರಿನಲ್ಲಿ ಚಂದನಾ ಮದುವೆ ಜರುಗಲಿದೆ. ಈ ಮದುವೆಯಲ್ಲಿ ಕುಟುಂಬಸ್ಥರು, ಆಪ್ತರು, ಕಿರುತೆರೆಯ ಕಲಾವಿದರು ಭಾಗಿಯಾಗಲಿದ್ದಾರೆ.