ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ದರ್ಶನ್ ವಿರುದ್ಧ ಇನ್ನೊಂದು ಮಹತ್ವದ ಸಾಕ್ಷಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ.
ವಿಧಿ ವಿಜ್ಞಾನ ಪ್ರಯೋಗಾಲಯ ವರದಿಯಲ್ಲಿ ಒಂದು ಭಯಾನಕ ಸತ್ಯ ಬಹಿರಂಗ ಆಗಿದೆ. ಪ್ರಕರಣ ನಡೆದ ದಿನ ದರ್ಶನ್ ಧರಿಸಿದ್ದ ಬಟ್ಟೆಗಳ ಮೇಲೆ ರೇಣುಕಾ ಸ್ವಾಮಿ ದೇಹದ ರಕ್ತದ ಕಲೆಗಳು ಇರುವುದು ಧೃಡಪಟ್ಟಿದೆ. ಇದರಿಂದ ದರ್ಶನ್ಗೆ ಕಾನೂನಿನ ಸಂಕಷ್ಟ ಹೆಚ್ಚಾಗಿದೆ.
ಆರೋಪಿಗಳ ಮನೆಯಿಂದ ಪೊಲೀಸರು ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದರು. ಎ2 ಆಗಿರುವ ದರ್ಶನ್ ಮನೆಯಲ್ಲಿ ವಶಪಡಿಸಿಕೊಂಡ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಮತ್ತು ಕಪ್ಪು ಬಣ್ಣದ ರೌಂಡ್ ನೆಕ್ ಶರ್ಟ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು.
ಎಫ್ಎಸ್ಎಲ್ ಪರಿಶೀಲನೆ ವೇಳೆ ದರ್ಶನ್ ಅವರ ಬಟ್ಟೆಯ ಮೇಲೆ ರಕ್ತದ ಕಲೆಗಳು ಪತ್ತೆಯಾಗಿದ್ದವು. ಇವುಗಳು ರೇಣುಕಾ ಸ್ವಾಮಿಯ ದೇಹದ ರಕ್ತ ಎಂಬುದು ವರದಿಯಲ್ಲಿ ಖಚಿತವಾಗಿದೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ಅಧಿಕೃತ ಮಾಹಿತಿ ನೀಡಬೇಕಿದೆ.