ಮೂರೇ ದಿನಕ್ಕೆ ಸೀಮಿತವಾದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯ ANPR ಕ್ಯಾಮೆರಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಈಗಾಗಲೇ ಬೈಕ್, ಆಟೋ, ಟ್ಯಾಕ್ಟರ್ ಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು, ಇದರ ಜೊತೆಗೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಎ.ಎನ್.ಪಿ.ಆರ್ (Automatic number plate recognition camera) ಅಳವಡಿಸಿತ್ತು. ಆದ್ರೆ ಇದೀಗ ಮೂರೇ ದಿನಕ್ಕೆ ಕ್ಯಾಮೆರಾ ಬಂದ್ ಆಗಿದೆ.

ದಿನದ 24 ಗಂಟೆ ಕಾರ್ಯನಿರ್ವಹಿಸುವ ಈ ಕ್ಯಾಮರಾಗಳು ವಾಹನಗಳ ನಂಬರ್ ಪ್ಲೇಟ್ ಗಳನ್ನು ರೀಡ್ ಮಾಡಿ, 100 ಕಿ.ಮೀಗಿಂತ ವೇಗವಾಗಿ ಸಂಚಾರ ಮಾಡುವ ವಾಹನಗಳ ಮಾಹಿತಿಯನ್ನು ಎನ್.ಹೆಚ್.ಎ.ಐ ಕಂಟ್ರೋಲ್ ರೂಮ್ ಹಾಗೂ ಪೊಲೀಸ್ ಇಲಾಖೆಗೆ ರವಾನಿಸುತ್ತದೆ. ಇದರ ಆಧಾರದ ಮೇಲೆ ಸಂಚಾರಿ ಪೊಲೀಸರು ವಾಹನಗಳಿಗೆ ದಂಡ ವಿಧಿಸುತ್ತಾರೆ.ಆದರೆ ಕ್ಯಾಮರಾ ಅಳವಡಿಸಿ ಕೇವಲ ಮೂರು ದಿನಕ್ಕೆ ಎ.ಎನ್.ಪಿ.ಆರ್.ಕ್ಯಾಮರಾ ಕಾರ್ಯನಿರ್ವಹಣೆ ಬಂದ್ ಆಗಿದೆ.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕ್ಯಾಮರಾ ಸ್ಥಗಿತಗೊಂಡಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇನ್ನೊಂದೆಡೆ ಮುಖ್ಯಮಂತ್ರಿಗಳು ಬಂದು ಪರಿಶೀಲನೆ ನಡೆಸುತ್ತಾರೆ ಎಂಬ ಕಾರಣಕ್ಕಷ್ಟೇ ಕ್ಯಾಮರಾ ಅಳವಡಿಕೆ ಸೀಮಿತವಾಗಿತ್ತು. ಈಗ ಏಕಾಏಕಿ ಕ್ಯಾಮರಾ ಬಂದ್ ಮಾಡಲಾಗಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!