SHOCKING | ಆಸ್ಟ್ರೇಲಿಯಾದ ಇಸ್ಕಾನ್ ದೇಗುಲದ ಗೋಡೆಗಳ ಮೇಲೆ ಭಾರತ ವಿರೋಧಿ ಬರಹ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾದಲ್ಲಿ ಖಲಿಸ್ತಾನಿಗಳು ಇಸ್ಕಾನ್ ದೇಗುಲದ ಗೋಡೆಗಳ ಮೇಲೆ ಭಾರತ ವಿರೋಧಿ ಬರಹಗಳನ್ನು ಬರೆದಿದ್ದಾರೆ. ಖಲಿಸ್ತಾನಿ ಸಂಘಟನೆಗಳು ದಿನದಿಂದ ದಿನಕ್ಕೆ ಪ್ರಬಲವಾಗುತ್ತಿದ್ದು,ಇಸ್ಕಾನ್ ಸಂಸ್ಥೆಯ ರಾಧಾಕೃಷ್ಣ ದೇಗುಲದ ಮೇಲೆ ಆಕ್ಷೇಪಾರ್ಹ ಹಾಗೂ ಅವಮಾನಕಾರಿ ಬರಹ ಬರೆಯಲಾಗಿದೆ.

15 ದಿನಗಳಿಂದ ಹಿಂದೂ ದೇಗುಲಗಳ ಮೇಲೆ ದಾಳಿ ನಡೆಯುತ್ತಲೇ ಇದ್ದು, ಇದು ತಿಂಗಳಲ್ಲಿ ಮೂರನೇ ದಾಳಿಯಾಗಿದೆ. ಇಸ್ಕಾನ್ ದೇಗುಲಗಳು ಹಾಗೂ ಹರೇಕೃಷ್ಣ ಚಳವಳಿ ಆಸ್ಟ್ರೇಲಿಯಾದಲ್ಲಿ ಜನಪ್ರಿಯ. ಈ ಚಿಂತನೆಯನ್ನು ಭಕ್ತಿಯೋಗ ಪಂಥ ಎಂದು ಕರೆಯುತ್ತಾರೆ.

ಖಲಿಸ್ತಾನ್ ಜಿಂದಾಬಾದ್, ಹಿಂದೂಸ್ತಾನ್ ಮುರ್ದಾಬಾದ್ ಘೋಷಣೆಗಳು ಕಾಣಿಸಿದ್ದು, ದೇಗುಲ ಆಡಳಿತ ತಕ್ಷಣ ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ. ಪದೇ ಪದೆ ಪ್ರಕರಣಗಳು ದಾಖಲಾಗಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!