ಶಿಥಿಲಗೊಂಡಿದ್ದ ಮನೆ ಮರು ನಿರ್ಮಾಣದ ವೇಳೆ ಸಿಕ್ಕಿತು ನೋಡಿ ಝಣ ಝಣ ಚಿನ್ನದ ನಾಣ್ಯ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಶಿಥಿಲಗೊಂಡಿದ್ದ ಮನೆಯೊಂದರ ಮರುನಿರ್ಮಾಣ ವೇಳೆ ಪುರಾತನ ಚಿನ್ನದ ನಾಣ್ಯಗಳು, ಲೋಹದ ಪಾತ್ರೆ, ಚಿನ್ನದ ತುಂಡು ಮತ್ತು ಹಳೆಯ ಚಿನ್ನಾಭರಣಗಳಿರುವ ನಿಧಿ ಪತ್ತೆಯಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ಪಾಟಿದಾರ್ ಮಾತನಾಡಿ, ಮನೆಯಲ್ಲಿ ಅವಶೇಷ ತೆರವುಗೊಳಿಸುವ ವೇಳೆ ಕಾರ್ಮಿಕರಿಂದ ಪುರಾತತ್ವ ಶಾಸ್ರ್ತದ ಪ್ರಾಮುಖ್ಯತೆಯ ನಿಧಿ ಪತ್ತೆಯಾಗಿದೆ. ಅವರು ಈ ವಿಚಾರವನ್ನು ಮಾಲಿಕರಿಗೆ ಹೇಳದಿರಲು ತೀರ್ಮಾನಿಸಿದರು ಎಂದರು.

ಕುಡಿತದ ಅಮಲಿನಲ್ಲಿದ್ದ ಎಂಟು ಕಾರ್ಮಿಕರಲ್ಲಿ ಓರ್ವ, ೫೬,೦೦೦ ರೂ. ಗೆ ಮೊಬೈಲ್ ಖರೀದಿಸಲು ಚಿನ್ನದ ನಾಣ್ಯಗಳನ್ನು ಮಾರಾಟ ಮಾಡಿದ್ದಾರೆ. ಅವರ ಸಂಭಾಷಣೆ ಮೂಲಕ ಈ ವಿಚಾರ ಪೊಲೀಸರಿಗೆ ತಲುಪಿದ್ದು ಕಾರ್ಮಿಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!