ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾನವ ಮತ್ತು ಕೀಟಗಳ ನಡುವಿನ ಸಂಬಂಧವು ಹೊಸ ಅನ್ವೇಷಣೆಗೆ ಕಾರಣಾವಾಗಿದೆ. ಉತ್ತರ ಅಮೇರಿಕಾದಲ್ಲಿ ಇತ್ತೀಚೆಗೆ ನಡೆದ ಅಪರೂಪದ ಘಟನೆಯೊಂದರಲ್ಲಿ ವಿಜ್ಞಾನಿಗಳಿ ಹೊಸ ಅನ್ವೇಷಣೆಯನ್ನು ಮಾಡಲು ಇರುವೆಗಳು ಸಹಾಯ ಮಾಡಿವೆ.
ಹೌದು, ಇರುವೆಗಳನ್ನು ಬೆಂಬತ್ತಿದ ಪ್ರಾಗ್ಜೀವಶಾಸ್ತ್ರಜ್ಞರ ಒಂದು ಸಣ್ಣ ಗುಂಪು ಇತ್ತೀಚೆಗೆ ವಿಜ್ಞಾನಕ್ಕೆ ತಿಳಿದಿಲ್ಲದ 10 ಜಾತಿಯ ಪ್ರಾಚೀನ ಸಸ್ತನಿಗಳನ್ನು ಕಂಡುಹಿಡಿದಿದೆ. ಈ ಅನ್ವೇಷಣೆಗೆ ಅವರುಗಳಿಗೆ ಇರುವೆಗಳು ಸಹಾಯಕರಾಗಿ ಕೆಲಸ ಮಾಡಿವೆ. ರೋಚೆಸ್ಟರ್ ಇನ್ಸ್ಟಿಟ್ಯೂಟ್ ಆಫ್ ವರ್ಟೆಬ್ರೇಟ್ ಪ್ಯಾಲಿಯಂಟಾಲಜಿ ಮೇ ತಿಂಗಳಲ್ಲಿ ಪ್ರಕಟವಾದ ಅಧ್ಯಯನದಲ್ಲಿ ವಿವರಿಸಿದಂತೆ ಇಲ್ಲಿಯವರೆಗೂ ವಿಜ್ಞಾನಕ್ಕೆ ತಿಳಿದಿಲ್ಲದ ಸಸ್ತನಿಗಳು ಪತ್ತೆಯಾಗಿದ್ದು ಈ ಹಿಂದೆ ಭೂಮಿಯ ಮೇಲೆ ವಾಸವಾಗಿದ್ದ ಅತ್ಯಂತ ಕಡಿಮೆ ತೂಕದ ಪಾಕೆಟ್ ಮೌಸ್, ಪರ್ವತ ಬೀವರ್ನ ಇಲಿ ಗಾತ್ರದ ಸಂಬಂಧಿ ಮತ್ತು ಕಾಂಗರೂ ಇಲಿಗಳ ಪೂರ್ವಜ ಜಾತಿಗೆ ಸೇರಿದ ಕೆಲ ಸಸ್ತಗಳನ್ನು ಕಂಡುಹಿಡಿದಿದ್ದಾರೆ.
ಇವು ಉತ್ತರ ಅಮೆರಿಕಾ ಪ್ರದೇಶದಲ್ಲಿ ಸುಮಾರು 33 ರಿಂದ 35 ಮಿಲಿಯನ್ ವರ್ಷಗಳ ಹಿಂದೆ ಅಸತ್ತಿತ್ವದಲ್ಲಿದ್ದವು ಎನ್ನಲಾಗುತ್ತಿದ್ದು ಪ್ರಾಚೀನ ಸಸ್ತನಿಗಳ ಅಧ್ಯಯನದ ಮೇಲೆ ಈ ಆವಿಷ್ಕಾರವು ಹೊಸಬೆಳಕು ಚೆಲ್ಲುತ್ತದೆ. ಪ್ರಾಗ್ಜೀವಶಾಸ್ತ್ರಜ್ಞರು ಮತ್ತು ಇರುವೆಗಳ ನಡುವಿನ ಸಹಯೋಗವು ಹೊಸ ಅನ್ವೇಷಣೆಗೆ ಕಾರಣವಾಗುತ್ತದೆ ಎಂಬುದನ್ನು ಈ ಪ್ರಕರಣ ಸಾಬೀತು ಮಾಡಿದಂತಿದೆ.