ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡ್ತೀನಿ ಎಂದು ಹೇಳಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ನಿರ್ದೇಶಕ ಅನುರಾಗ್ ಕಶ್ಯಪ್ ಇದೀಗ ಮನಸ್ಪೂರ್ವಕವಾಗಿ ಕ್ಷಮೆಯಾಚನೆ ಮಾಡಿದ್ದಾರೆ.
ಕೋಪದಲ್ಲಿ ವ್ಯಕ್ತಿಯೋರ್ವರಿಗೆ ಉತ್ತರಿಸುವಾಗ, ನಾನು ನನ್ನ ಇತಿಮಿತಿಗಳನ್ನು ಮರೆತು ಇಡೀ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದೇನೆ. ಆ ಸಮುದಾಯದ ಅನೇಕರು ನನ್ನ ಸಹೋದ್ಯೋಗಿಗಳು. ಜೊತೆಗೆ, ನನ್ನನ್ನು ಬೆಂಬಲಿಸುತ್ತಾರೆ. ಅವರೆಲ್ಲರೂ ನನ್ನಿಂದ ನೋವಿಗೊಳಗಾಗಿದ್ದಾರೆ. ನನ್ನ ಕುಟುಂಬಕ್ಕೂ ನನ್ನಿಂದ ನೋವಾಗಿದೆ. ನಾನು ಗೌರವಿಸುವ ಅನೇಕ ಬುದ್ಧಿಜೀವಿಗಳಿಗೆ, ನನ್ನ ಕೋಪ ಮತ್ತು ನನ್ನ ಮಾತನಾಡುವ ವಿಧಾನದಿಂದ ನೋವುಂಟಾಗಿದೆ.
ನೋವುಂಟುಮಾಡಿದ ಪ್ರತಿಯೊಬ್ಬರಿಗೂ ಮನದಾಳದಿಂದ ಕ್ಷಮೆಯಾಚಿಸುತ್ತೇನೆ. ನಾನು ಇದನ್ನು ಈ ಸಮಾಜಕ್ಕೆ ಹೇಳಲು ಬಯಸಿರಲಿಲ್ಲ. ಆದರೆ ಕೋಪದಲ್ಲಿ, ಯಾರೋ ಒಬ್ಬರ ಚೀಪ್ ಕಾಮೆಂಟ್‌ಗೆ ಉತ್ತರಿಸುವಾಗ, ಈ ಹೇಳಿಕೆ ನೀಡಿದ್ದೇನೆ. ಹೀಗೆ ಮಾತನಾಡಿದ್ದಕ್ಕಾಗಿ ನಾನು ನನ್ನ ಎಲ್ಲಾ ಸಹೋದ್ಯೋಗಿಗಳಿಗೆ, ನನ್ನ ಕುಟುಂಬಕ್ಕೆ ಮತ್ತು ಆ ಸಮಾಜಕ್ಕೆ ನಾನು ಕ್ಷಮೆಯಾಚಿಸುತ್ತೇನೆ. ಇದು ಮತ್ತೆ ಸಂಭವಿಸಬಾರದು. ಆ ನಿಟ್ಟಿನಲ್ಲಿ ಮುಂದುವರೆಯುತ್ತೇನೆ. ಇನ್ಮುಂದೆ ಸಮಸ್ಯೆ ಬಗ್ಗೆ ಮಾತನಾಡಬೇಕಾದರೆ, ನಾನು ಸೂಕ್ತ ಪದಗಳನ್ನು ಬಳಸುತ್ತೇನೆ. ನೀವು ನನ್ನನ್ನು ಕ್ಷಮಿಸುತ್ತೀರಿ ಎಂದು ನಾನು ಭಾವಿಸುತ್ತೇನೆ” ಎಂದು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.