ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಲೋಕಸೇವಾ ಆಯೋಗ 2024 ರ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಪ್ರಕಟಿಸಿದೆ. ಶಕ್ತಿ ದುಬೆ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಗಳಿಸುವ ಮೂಲಕ ದೇಶದಲ್ಲೇ ಅಗ್ರಸ್ಥಾನ ಪಡೆದಿದ್ದಾರೆ.
ಆಯೋಗವು ಒಟ್ಟು 1009 ಅಭ್ಯರ್ಥಿಗಳನ್ನು ಶಿಫಾರಸು ಮಾಡಿದೆ, ಇದರಲ್ಲಿ ಸಾಮಾನ್ಯ ವರ್ಗದಿಂದ 335, ಇಡಬ್ಲ್ಯೂಎಸ್ ನಿಂದ 109, ಒಬಿಸಿಯಿಂದ 318, ಎಸ್‌ಸಿಯಿಂದ 160 ಮತ್ತು ಎಸ್‌ಸಿ ವರ್ಗದಿಂದ 87 ಅಭ್ಯರ್ಥಿಗಳು ಸೇರಿದ್ದಾರೆ. ಸಂದರ್ಶನವನ್ನು ಜನವರಿ 7, ರಿಂದ ಏಪ್ರಿಲ್ 17 ರವರೆಗೆ ನಡೆಸಲಾಯಿತು.
ಮುಖ್ಯ ಪರೀಕ್ಷೆಯನ್ನು ಸೆಪ್ಟೆಂಬರ್ 2024 ರಲ್ಲಿ ನಡೆಸಲಾಯಿತು. ಯಶಸ್ವಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಯಿತು. ಸಂದರ್ಶನದಲ್ಲಿ ಒಟ್ಟು 2845 ಅಭ್ಯರ್ಥಿಗಳು ಭಾಗವಹಿಸಿದ್ದರು. ಆಯ್ಕೆಯಾದ ಅಭ್ಯರ್ಥಿಗಳಲ್ಲಿ, ಯುಪಿಎಸ್‌ಸಿ 241 ಅಭ್ಯರ್ಥಿಗಳ ಉಮೇದುವಾರಿಕೆಯನ್ನು ಮುಂದಿನ ಪರಿಶೀಲನೆಯವರೆಗೆ ತಾತ್ಕಾಲಿಕವಾಗಿ ಇರಿಸಿದೆ.
ಟಾಪ್ 10 ಯಾರು?
- ಶಕ್ತಿ ದುಬೆ
- ಹರ್ಷಿತಾ ಗೋಯೆಲ್
- ಡೋಂಗ್ರೆ ಅರ್ಚಿತ್ ಪರಾಗ್
- ಶಾ ಮಾರ್ಗಿ ಚಿರಾಗ್
- ಆಕಾಶ್ ಗರ್ಗ್
- ಕೊಮ್ಮಲ್ ಪುನಿಯಾ
- ಆಯುಷಿ ಬನ್ಸಾಲ್
- ರಾಜ್ ಕೃಷ್ಣ ಝಾ
- ಆದಿತ್ಯ ವಿಕ್ರಮ್ ಅಗರ್ವಾಲ್
- ಮಾಯಾಂಕ್ ತ್ರಿಪಾಠಿ