‘ಚಕ್ಡಾ ಎಕ್ಸ್‌ಪ್ರೆಸ್‌’ ಸಿನಿಮಾ: ಪೂರ್ವ ಸಿದ್ಧತೆಯಲ್ಲಿ ಅನುಷ್ಕಾ ಶರ್ಮಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಮಹಿಳಾ ವೇಗದ ಬೌಲರ್ ಜೂಲನ್ ಗೋಸ್ವಾಮಿ ಅವರ ಬಯೋಪಿಕ್​​ ‘ಚಕ್ಡಾ ಎಕ್ಸ್‌ಪ್ರೆಸ್‌’ ಸಿನಿಮಾದಲ್ಲಿ ನಟಿಸಲಿರುವ ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಈಗಾಗಲೇ ಭರ್ಜರಿ ತಯಾರಿ ಆರಂಭಿಸಿದ್ದಾರೆ.
ಈ ಕುರಿತು ಪೂರ್ವ ಸಿದ್ಧತೆಯಲ್ಲಿರುವ ಅನುಷ್ಕಾ, ಎರಡು ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು, ಗ್ರಿಪ್ ಬೈ ಗ್ರಿಪ್ ಎಂದು ಬರೆದುಕೊಂಡಿದ್ದಾರೆ. ಇನ್ನು ಅನುಷ್ಕಾ ಪೋಸ್ಟ್​ಗೆ ಕ್ರಿಕೆಟರ್​​ ಜೂಲನ್ ಗೋಸ್ವಾಮಿ ಪ್ರತಿಕ್ರಿಯಿಸಿದ್ದು, ತುಂಬಾ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಶ್ವ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಬೌಲರ್‌ ಜೂಲನ್ ಗೋಸ್ವಾಮಿಯವರ ಅದ್ಭುತ ಪ್ರಯಾಣವನ್ನು ಆಧಾರವಾಗಿಟ್ಟುಕೊಂಡು ಚಕ್ಡಾ ಎಕ್ಸ್‌ಪ್ರೆಸ್‌ ಸಿನಿಮಾವನ್ನು ನಿರ್ಮಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!