ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯವಾಡ ಸರ್ಕಾರಿ ಆಸ್ಪತ್ರೆಯಲ್ಲಿ ಮೂವರು ಮಾನವ ಮೃಗಗಳು ಮಾನಸಿಕ ವಿಕಲಚೇತನ ಯುವತಿ ಮೇಲೆರಗಿ ಅತ್ಯಾಚಾರ ಮಾಡಿದ್ದಾರೆ. ಈ ಘಟನೆ ಸಂಬಂಧ ರಾಜ್ಯ ಸರ್ಕಾರ ಪೊಲೀಸರ ವಿರುದ್ಧ ಕ್ರಮ ಕೈಗೊಂಡಿದೆ. ಸಿಐ, ಸೆಕ್ಟರ್ ಎಸ್ಸೈ ಅಮಾನತು ಮಾಡುವಂತೆ ಆದೇಶ ಜಾರಿಮಾಡಿದೆ. ಏಪ್ರಿಲ್ 21,2022 ಬೆಳಕಿಗೆ ಬಂದ ಘಟನೆ ನೆರೆ ರಾಜ್ಯದಲ್ಲಿ ಸಂಚಲನ ಮೂಡಿಸಿದೆ.
ತಮ್ಮ ಮಗಳು ಕಾಣುತ್ತಿಲ್ಲವೆಂದು ಆತಂಕದಿಂದ ದೂರು ನೀಡಲು ಠಾಣೆಗೆ ಹೋದ ಪೋಷಕರಿಗೆ ಪೊಲೀಸರು ಸ್ಪಂದಿಸದೇ ನಿರ್ಲಕ್ಚ್ಯ ವಹಿಸಿದ್ದಾರೆ. ಕೊನೆ ಬಾರಿ ಯಾವುದೋ ನಂಬರ್ ನಿಂದ ಕರೆ ಬಂದಿದೆ ಎಂದು ಸಾಕ್ಷಿ ನೀಡದರೂ ಸಂಜೆ ಬನ್ನಿ ಎಂದು ನಿರ್ಲಕ್ಚ್ಯ ಧೋರಣೆ ಅನುಸರಿಸಿದ್ದಾರೆ. ಎಲ್ಲಡೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಚನ್ನ ಬಾಬಯರಾವ್, ದಾರಾ ಶ್ರೀಕಾಂತ್, ಜೋರಂಗುಲ ಪವನ್ ಕಲ್ಯಾನ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಆಸ್ಪತ್ರೆಗೆಂದು ಬಂದ ಮಾನಸಿಕ ವಿಂಗಲಚೇತನ ಯುವತಿಯನ್ನು ಸತತ ಮೂವತ್ತು ಗಂಟೆಗಳ ಕಾಲ ಆಸ್ಪತ್ರೆಯ ಕೊಠಡಿಯೊಂದರಲ್ಲಿ ಬಂಧಿಸಿ ಮೂವರು ಸಾಮೂಹಿಕ ಅತ್ಯಾಚಾರ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಮಗಳನ್ನು ಹುಡುಕಿಕೊಂಡು ಆಸ್ಪತ್ರೆ ಬಳಿ ಬಂದ ಹೆತ್ತವರಿಗೆ ಹೃದಯ ಹೊಡೆದುಹೋಗುವ ಸನ್ನಿವೇಶ ಎದುರಾಗಿದೆ. ಲಿಫ್ಟ್ ಪಕ್ಕದಲ್ಲಿದ್ದ ಚಿಕ್ಕ ಕೋಣೆಯಲ್ಲಿ ಕಾಮುಕ ಪವನ್ ಕಲ್ಯಾಣ್ ಅತ್ಯಾಚಾರ ಎಸಗುತ್ತಾ ಸಿಕ್ಕಿಬಿದ್ದಿದ್ದಾನೆ. ಕಣ್ಣೆದುರೇ ಮಗಳು ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಿರುವುದನ್ನು ತಿಳಿದ ಸಂತ್ರಸ್ತೆಯ ಪೋಷಕರು ಆಘಾತಕ್ಕೊಳಗಾಗಿದ್ದಾರೆ.
ಇಡೀ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಪೊಲೀಸರ ನಿರ್ಲಕ್ಷ್ಯದಿಂದ ಅಮಾಯಕ ಬಾಲಕಿಯ ಬದುಕು ಹಾಳಾಗಿದೆ ಎಂಬ ಟೀಕೆಗಳು ಬರುತ್ತಿವೆ. ದುರಂತಕ್ಕೆ ಕಾರಣರಾದ ಸಿಐ ಹನೀಷ್ ಮತ್ತು ಎಸ್ಸೈ ಶ್ರೀನಿವಾಸ ರಾವ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.
ವಿಕಲಚೇತನರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆಯ ಕುರಿತು ಮುಂದಿನ ಕ್ರಮ ಕೈಗೊಳ್ಳುವಂತೆ ಆರೋಗ್ಯ ಸಚಿವೆ ವಿಡಾಲ ರಜನಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಭದ್ರತೆ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ಮೇರೆಗೆ, ವೈದ್ಯಕೀಯ ಆರೋಗ್ಯ ಇಲಾಖೆ ಆರೋಪಿಗಳನ್ನು ತಕ್ಷಣ ವಜಾಗೊಳಿಸಿ ಆದೇಶ ಹೊರಡಿಸಿದೆ.