I.N.D.I.A ಮೈತ್ರಿಗೆ ಶಾಕ್ ಕೊಟ್ಟ ಆಪ್: ಲೋಕಸಭೆಗೆ 3 ಅಭ್ಯರ್ಥಿಗಳ ಹೆಸರು ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯಾ ಮೈತ್ರಿಯಿಂದ ದೂರ ಸರಿದು ಆಪ್, ತೃಣಮೂಲ ಕಾಂಗ್ರೆಸ್ ಏಕಾಂಗಿ ಹೋರಾಟದ ಘೋಷಣೆ ಮಾಡಿದೆ.

ಇದರ ನಡುವೆ ಅಸ್ಸಾಂನಲ್ಲಿ ಆಮ್ ಆದ್ಮಿ ಪಾರ್ಟಿ ಲೋಕಸಭಾ ಚುನಾವಣೆಯ ಮೂವರು ಅಭ್ಯರ್ಥಿಗಳ ಹೆಸರುು ಘೋಷಿಸಿದೆ. ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿ ಕೂಟದ ಜೊತೆ ಯಾವುದೇ ಚರ್ಚೆ ನಡೆಸಿದ ಮೂವರು ಅಭ್ಯರ್ಥಿಗಳ ಹೆಸರು ಘೋಷಿಸಿದೆ. ಆಮ್ ಆದ್ಮಿ ಪಾರ್ಟಿ ನಡೆಯಿಂದ ಕಾಂಗ್ರೆಸ್ ಹೈರಾಣಿಗಿದೆ. ಇತ್ತ ಇಂಡಿಯಾ ಮೈತ್ರಿ ಕಗ್ಗಂಟಾಗಿದೆ.

ಅಸ್ಸಾಂನ ದಿರುಬಾಗ್ ಲೋಕಸಭಾ ಕ್ಷೇತ್ರದಿಂದ ಮನೋಜ್ ಧನೋಹರ್, ಗುವ್ಹಾಟಿ ಕ್ಷೇತ್ರದಿಂದ ಭಾವೆನ್ ಚೌಧರಿ ಹಾಗೂ ಸೋನಿತಪುರ ಕ್ಷೇತ್ರರಿಂದ ರಿಶಿ ರಾಜ್‌ಗೆ ಆಮ್ ಆದ್ಮಿ ಪಾರ್ಟಿ ಟಿಕೆಟ್ ಘೋಷಿಸಿದೆ. ಆಮ್ ಆದ್ಮಿ ರಾಜ್ಯಸಭಾ ಸಂಸದ ಸಂದೀಪ್ ಪಾಠಕ್ ಅಸ್ಸಾ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಹೆಸರು ಘೋಷಿಸಿದ್ದಾರೆ. ಇದೇ ವೇಳೆ ಅಸ್ಸಾಂನಲ್ಲಿ ಇಂಡಿಯಾ ಮೈತ್ರಿ ಒಕ್ಕೂಟ ಆಪ್ ಅಭ್ಯರ್ಥಿಗಳನ್ನು ಬೆಂಬಲಿಸುವ ನಿರೀಕ್ಷೆ ಇದೆ ಎಂದಿದ್ದಾರೆ.

ಇತ್ತ ಆಪ್ ಅಭ್ಯರ್ಥಿಗಳ ಘೋಷಣೆಗೂ ಮೊದಲು ಇಂಡಿಯಾ ಮೈತ್ರಿ ಕೂಟವನ್ನು ಸಂಪರ್ಕಿಸಿಲ್ಲ ಅನ್ನೋ ಮಾತುಗಳು ಕೇಳಿಬಂದಿದೆ. ಆಪ್ ಏಕಾಂಗಿ ನಿರ್ಧಾರ ಇದೀಗ ಇಂಡಿಯಾ ಮೈತ್ರಿಗೆ ತೀವ್ರ ಹಿನ್ನಡೆ ತಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here