ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಾ.ಪುನೀತ್‌ರಾಜ್‌ಕುಮಾರ್‌ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಪ್ರಶಸ್ತಿಯನ್ನು ಗೌರವವನ್ನು ಸ್ವೀಕರಿಸಿದರು.
ಇನ್ನು ಈ ವೇಳೆ ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್, 1992ರಲ್ಲಿ ಅಪ್ಪಾಜಿಗೆ(ರಾಜ್‌ಕುಮಾರ್) ‘ಕರ್ನಾಟಕ ರತ್ನ’ ಪ್ರಶಸ್ತಿ ದೊರಕಿತ್ತು. ಕಾರ್ಯಕ್ರಮಕ್ಕೆ ಅಪ್ಪಾಜಿ ನನ್ನನ್ನು ಕರೆದುಕೊಂಡು ಬಂದಿದ್ರು. ಈಗ ತಮ್ಮ ಕರೆದುಕೊಂಡು ಬಂದಿದ್ದಾನೆ ಎಂದ ಭಾವುಕರಾದರು.
2021ರಲ್ಲಿ ಒಂದು ಗೀಟ್ ಇದೆ.ಈ ಗೀಟಿನಲ್ಲಿ ಹೇಗೆ ಬದುಕಿದ್ದೇವೆ ಎಂದು ಇಂಪಾರ್ಟೆಂಟ್ . ಸತ್ತ ದಿನ ಅಲ್ಲ ಹುಟ್ಟಿದ ದಿನ. ಸಂದೇಶ ಕೊಡುವುದಕ್ಕೆ ಗಂಧದಗುಡಿ ಸಾಕ್ಷ್ಯಚಿತ್ರ ನಿರ್ಮಾಣ ಮಾಡಲಾಗಿದ್ದು, ಕಾಡು, ನೀರು, ಪರಿಸರ ಬಗ್ಗೆ ಜಾಗೃತಿ ಮೂಡಿಸಲು ನಟನೆ ಮಾಡಿದ್ದಾನೆ, ಅಭಿಮಾನಿಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು ಎಂದರು.
ಒಂದು ಸಂದೇಶ ಕೊಡುವುದಕ್ಕೆ ಗಂಧದಗುಡಿ ಮಾಡಿದ್ದಾನೆ. ಮಕ್ಕಳಿಗೆ ಇದನ್ನು ತೋರಿಸಬೇಕು ಕಲಿಸಬೇಕು. ಕಾಡು , ನೀರು , ಪರಿಸರ ತಿಳಿದುಕೊಳ್ಳಬೇಕು. ಎಂದರು.
ಇನ್ನು ಪುನಿತ್ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಮಳೆಯನ್ನೂ ಲೆಕ್ಕಿಸದೇ ಭಾಗವಹಿಸಿದ್ದ ಅಭಿಮಾನಿಗಳಿಗೆ ಧನ್ಯವಾದ ಹೇಳಿದರು.