ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಪಲ್ ಸಂಸ್ಥೆ ಕೆಲವು ಏರ್‌ಪಾಡ್‌ಗಳು ಮತ್ತು ಬೀಟ್ಸ್ ಹೆಡ್‌ಫೋನ್ ಉತ್ಪಾದನೆಯನ್ನು ಭಾರತಕ್ಕೆ ಸ್ಥಳಾಂತರಿಸಲು ನಿರ್ಧರಿಸಿದೆ.
ಈ ಬಗ್ಗೆ ತನ್ನ ಪೂರೈಕೆದಾರರನ್ನು ಕೇಳುತ್ತಿದ್ದು, ಭಾರತಕ್ಕೆ ಉತ್ಪಾದನೆಯನ್ನು ಸ್ಥಳಾಂತರಿಸಲು ಆಪಲ್ ಕೇಳುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
ಜಾಗತಿಕ ಪೂರೈಕೆ ಸರಪಳಿಯಲ್ಲಿ ಎತ್ತರದ ಸ್ಥಾನಕ್ಕೆ ತೆರಳಲು ಪ್ರಯತ್ನಿಸುತ್ತಿರುವ ದಕ್ಷಿಣ ಏಷ್ಯಾ ರಾಷ್ಟ್ರಕ್ಕೆ ಈ ಸ್ಥಳಾಂತರದಿಂದ ಗೆಲುವು ಸಿಕ್ಕಂತಾಗಿದೆ. ಈ ಸ್ಥಳಾಂತರ ಆಪಲ್‌ನ ವೈವಿಧ್ಯೀಕರಣದ ಭಾಗವಾಗಿದೆ. ದೇಶದಲ್ಲಿ ಶೂನ್ಯ ಕೋವಿಡ್ ನೀತಿ ಇದ್ದು, ಚೀನಾದಿಂದ ಆಮದು ಮಾಡಿಕೊಳ್ಳುವ ಸಮಯದಲ್ಲಿ ಉದ್ಭವಿಸುವ ಪೂರೈಕೆ ಸರಪಳಿಯ ಅಡೆತಡೆಗಳ ಅಪಾಯ ಕಡಿಮೆ ಆಗಲಿದೆ.
ಈಗಾಗಲೇ ಭಾರತದಲ್ಲಿ ತನ್ನ ಉತ್ಪಾದನೆಯನ್ನು ಹೆಚ್ಚಿಸುವ ಕುರಿತು ಆಪಲ್ ಚಿಂತಿಸಿದ್ದು, ಪೂರೈಕೆದಾರರೊಂದಿಗೆ ಮಾತುಕತೆ ನಡೆದಿದೆ. ಮುಂದಿನ ವರ್ಷದಿಂದಲೇ ಇದು ಜಾರಿಗೆ ಬರಲಿದೆ.
ಐಫೋನ್ ಅಸೆಂಬ್ಲರ್ ಫಾಕ್ಸ್‌ಕಾನ್ ದೇಶದಲ್ಲಿ ಬೀಟ್ಸ್ ಹೆಡ್‌ಫೋನ್‌ಗಳನ್ನು ತಯಾರಿಸುವ ಸಿದ್ಧತೆ ನಡೆಸಿದೆ. ಏರ್‌ಪಾಡ್‌ಗಳನ್ನು ಅಲ್ಲಿಯೂ ಉತ್ಪಾದಿಸುವ ಆಶಯ ಹೊಂದಿದೆ ಎನ್ನಲಾಗಿದೆ.