ಭಾರತದಲ್ಲಿ ಎರಡನೇ ಫ್ಯಾಕ್ಟರಿ ತೆರೆಯಲು ಚಿಂತಿಸುತ್ತಿದೆ ಆಪಲ್‌ ಪೂರೈಕೆದಾರ ಪೆಗಾಟ್ರಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಾಗತಿಕ ಟೆಕ್‌ ದೈತ್ಯ ಆಪಲ್‌ ಇಂಕ್‌ ಗೆ ಬಿಡಿಭಾಗಗಳ ಪೂರೈಕೆದಾರನಾಗಿರುವ ತೈವಾನ್‌ ಮೂಲದ ಪೆಗಾಟ್ರಾನ್‌ ಕಾರ್ಪ್‌ ಇದೀಗ ಭಾರತದಲ್ಲಿ ತನ್ನ ಎರಡನೇ ಉತ್ಪಾದನಾ ಘಟಕವನ್ನು ತೆರೆಯಲು ಮಾತುಕತೆ ನಡೆಸುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯೀಟರ್ಸ್‌ ವರದಿ ಮಾಡಿದೆ.

ವರದಿಯ ಪ್ರಕಾರ, ಪೆಗಾಟ್ರಾನ್‌ ತನ್‌ ಎರಡನೇ ಉತ್ಪಾದನಾ ಘಟಕವನ್ನೂ ತಮಿಳುನಾಡಿನ ಚೆನ್ನೈನಲ್ಲಿ ಸ್ಥಾಪಿಸಲು ಯೋಚಿಸುತ್ತಿದೆ. ಆರು ತಿಂಗಳ ಹಿಂದೆ ಪೆಗಾಟ್ರಾನ್‌ ತನ್ನ ಮೊದಲ ಭಾರತೀಯ ಫ್ಯಾಕ್ಟರಿಯನ್ನು ಚೆನ್ನೈನಲ್ಲಿ ತೆರೆದಿತ್ತು. ನಂತರದಲ್ಲಿ ಸುಮಾರು 150 ಮಿಲಿಯನ್‌ ಡಾಲರ್‌ ಗಳನ್ನು ಹೂಡಿಕೆ ಮಾಡಿತ್ತು. ಈಗ ಎರಡನೇ ಘಟಕವು ಮುಖ್ಯವಾಗಿ ಐಫೋನ್‌ ಜೋಡಣೆ ಕಾರ್ಯಕ್ಕೆ ಮೀಸಲಿರುತ್ತದೆ ಎಂದು ಮೂಲಗಳು ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೋವಿಡ್‌ ಸ್ಪೋಟದಿಂದಾಗಿ ಚೀನಾವನ್ನು ತೊರೆದ ನಂತರ ಆಪಲ್‌ ಭಾರತವನ್ನು ತನ್ನ ಪ್ರಮುಖ ಉತ್ಪಾದನಾ ಕೇಂದ್ರವಾಗಿಸುವತ್ತ ಮುಂದುವರೆಯುತ್ತಿದ್ದು ಪ್ರಸ್ತುತ ಭಾರತದಲ್ಲಿ ಐಫೋನ್‌ ಉತ್ಪಾದನೆ ಏರುಗತಿಯನ್ನು ದಾಖಲಿಸುತ್ತಿದೆ. ವಾರ್ಷಿಕ ಆಧಾರದಲ್ಲಿ ಭಾರತದಲ್ಲಿ ಉತ್ಪಾದನೆಯಾಗುವ ಐಫೋನ್‌ಗಳಲ್ಲಿ ಪೆಗಾಟ್ರಾನ್ 10 ಶೇಕಡಾದಷ್ಟು‌ ಪಾಲು ಹೊಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!