ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಪ್ರೀತಿಯ ಪರಮಾತ್ಮ ಕನ್ನಡದ ಕಣ್ಮಣಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮರೆಯಾಗಿ ಇಂದಿಗೆ ಮೂರು ವರ್ಷ. ಅವರ ನೆನಪು ಕನ್ನಡಿಗರಲ್ಲಿ ಅಚ್ಚಳಿಯದೆ ಇನ್ನು ಹಾಗೆ ಉಳಿದಿದೆ.
ಕೇವಲ ಕನ್ನಡಿಗರಲ್ಲದೇ ಇಡೀ ಭಾರತೀಯ ಚಿತ್ರರಂಗದಲ್ಲಿ ಅವರ ನೆನಪು ಅಚ್ಚಳಿಯದೆ ಉಳಿದಿದೆ. ಅಪ್ಪು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ ಅವರ ಅಭಿಮಾನಿಗಳು ಅವರನ್ನು ಜೀವಂತವಾಗಿರಿಸಿದ್ದಾರೆ.
2021 ಅಕ್ಟೋಬರ್ 29ರಂದು ಹೃದಯಾಘಾತದಿಂದ ಅಪ್ಪು ನಿಧನರಾದರು. ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ನಮ್ಮನ್ನಗಲಿ ಇಂದಿಗೆ 3 ವರ್ಷವಾಗಿದೆ. ಮೂರನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಪತ್ನಿ ಅಶ್ವಿನಿ ಅವರು ಮಕ್ಕಳು, ಕುಟುಂಬಸ್ಥರು ಇಂದು ಪೂಜೆ ಸಲ್ಲಿಸಲಿದ್ದಾರೆ.