September 29, 2026
Tuesday, September 29, 2026
spot_img

ಡಿವೈಡರ್‌ಗೆ ಡಿಕ್ಕಿ ಹೊಡೆದ APSRTC ಬಸ್: ಪ್ರಯಾಣಿಕರು ಸೇಫ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರದ ಶಿವಾನಂದ ಸರ್ಕಲ್ ಸಮೀಪ ಇಂದು ಬೆಳಗಿನ ಜಾವ ಆಂಧ್ರ ಪ್ರದೇಶ ಸಾರಿಗೆ ನಿಗಮದ (APSRTC) ಬಸ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾದ ಘಟನೆ ನಡೆದಿದೆ.

ವೇಗವಾಗಿ ಬರುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಅಪ್ಪಳಿಸಿದ ಪರಿಣಾಮ ಮುಂಭಾಗದ ಭಾಗ ಭಾರೀ ಹಾನಿಗೊಳಗಾಗಿದೆ. ಅಧೋನಿಯಿಂದ ಅನಂತಪುರ ಮಾರ್ಗವಾಗಿ ಬೆಂಗಳೂರಿನತ್ತ ಬರುತ್ತಿದ್ದ ಈ ಬಸ್ ಅಪಘಾತದ ವೇಳೆ ಮುಂಭಾಗದ ಚಕ್ರ ಮತ್ತು ಎಂಜಿನ್ ಭಾಗವೇ ಕಿತ್ತು ಹೊರಬಂದಿದ್ದು, ಸ್ಥಳದಲ್ಲಿದ್ದವರಿಗೆ ಆತಂಕ ಉಂಟುಮಾಡಿತು. ಡಿಕ್ಕಿಯ ತೀವ್ರತೆಯಿಂದ ಬಸ್ ರಸ್ತೆ ಮಧ್ಯೆ ಸಿಲುಕಿಕೊಂಡಿದ್ದು, ಸಂಚಾರಕ್ಕೂ ಕೆಲಕಾಲ ಅಡಚಣೆ ಉಂಟಾಯಿತು.

ಇದನ್ನೂ ಓದಿ:

ಬಸ್ಸಿನಲ್ಲಿದ್ದ ಎಲ್ಲ ಪ್ರಯಾಣಿಕರೂ ಸುರಕ್ಷಿತರಾಗಿದ್ದಾರೆ. ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಗಾಯಗಳ ವರದಿ ಆಗಿಲ್ಲ. ಸಮಯಕ್ಕೆ ಸರಿಯಾಗಿ ಚಾಲಕ ಬಸ್ ನಿಯಂತ್ರಿಸಲು ಮಾಡಿದ ಪ್ರಯತ್ನದಿಂದ ದೊಡ್ಡ ದುರಂತ ತಪ್ಪಿದಂತಾಗಿದೆ.

ಘಟನಾ ಸ್ಥಳಕ್ಕೆ ಹೈಗ್ರೌಂಡ್ಸ್ ಪೊಲೀಸ್ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಡಿವೈಡರ್‌ಗೆ ಸಿಲುಕಿರುವ ಬಸ್ ಅನ್ನು ಹೊರತೆಗೆದು ರಸ್ತೆ ಸಂಚಾರವನ್ನು ಸಾಮಾನ್ಯಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

Must Read