ಹೊಸದಿಗಂತ ವರದಿ,ಕಲಬುರಗಿ:
ಜಿಲ್ಲೆಯ ಭೀಮಾ ತೀರದಲ್ಲಿರುವ ಅಫಜಲಪುರ ತಾಲೂಕಿನ ಸುಕ್ಷೇತ್ರ ಮಣ್ಣೂರಲ್ಲಿ ಉತ್ತರಾದಿ ಮಠಾಧೀಶರಾದ ವೇದೇಶತೀರ್ಥರ 400ನೇ ಆರಾಧನಾ ಮಹೋತ್ಸವ ಶ್ರೀಮನ್ಯಾಯಸುಧಾ ಮಂಗಳ ಮಹೋತ್ಸವ ಹಾಗೂ ಶ್ರೀ ಮಹಾಭಾರತ ತಾತ್ಪರ್ಯ ನಿರ್ಣಯ ಮಂಗಳ ಮಹೋತ್ಸವ ಸಮಾರಂಭ ಸಂಭ್ರಮದಿಂದ ಜರುಗಿತು.
ಬೆಳಗ್ಗೆ 6 ಗಂಟೆಗೆ ಸುಪ್ರಭಾತ, ಚೆನ್ನಕೇಶವ ದೇವರಿಗೆ ಪಂಚಾಮೃತ ಅಭಿಷೇಕ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರಿಂದ ನ್ಯಾಯಸುಧಾ ಪಾಠ ವೇದೇಶತೀರ್ಥ ವಿದ್ಯಾಪೀಠದಲ್ಲಿ ಶ್ರೀಮನ್ಯಾಯ ಸುಧಾ ಗ್ರಂಥ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಂದ ಗುರುಗಳ ಹಾಗೂ ವಿದ್ವಾಂಸರ ಸಮ್ಮುಖದಲ್ಲಿ ಪರೀಕ್ಷೆ ನಂತರ ರಥೋತ್ಸವ ಶ್ರೀಗಳವರಿಂದ ಭಕ್ತಾದಿಗಳಿಗೆ ಮುದ್ರಾ ಧಾರಣೆ ಶ್ರೀಗಳವರಿಂದ ಸಂಸ್ಥಾನ ಪೂಜೆ ಮುಂಬೈ ಮುಲುಂಡನ ಪಂಡಿತ ವಿಧ್ಯಾಸಿಂಹಾಚಾರ್ಯ ಮಾಹುಲಿ ಪಂಡಿತ ಮಧ್ವಾಚಾರ್ಯ ಮೊಖಾಶಿ ಅನಂತಾಚಾರ್ಯ ಅಕಮಂಚಿ ಸರ್ವೇಶಾಚಾರ್ಯ ಅಕಮಂಚಿ ಅವರಿಂದ ವೇದೇಶತೀರ್ಥರ ಮಹಿಮೆ ಕುರಿತು ಉಪನ್ಯಾಸ ನಂತರ ಶ್ರೀಗಳ ಅನುಗ್ರಹ ಸಂದೇಶ ಜರುಗಿತು.
ಸಾಯಂಕಾಲ ವೇದೇಶತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಅನುವಾದ ಪರೀಕ್ಷೆ ಕಾರ್ತೀಕ ಮಾಸದ ನಿಮಿತ್ತ ದೀಪೋತ್ಸವ ಪಲ್ಲಕ್ಕಿ ಉತ್ಸವ ಭಜನೆ ಗುರುಗಳ ಅನುಗ್ರಹ ಸಂದೇಶ ಮಹಾಮಂಗಳಾರತಿ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು .