ಮೆಕ್ಸಿಕೋದ ಪರ್ಯಾಯ ದ್ವೀಪದಲ್ಲಿ ಪ್ರಾಚೀನ ಮಾಯನ್‌ ನಗರದ ಅವಶೇಷಗಳು ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೆಕ್ಸಿಕೋದ ಯುಕಾಟಾನ್ ಪರ್ಯಾಯ ದ್ವೀಪದಲ್ಲಿ ಪುರಾತತ್ವಶಾಸ್ತ್ರಜ್ಞರು ಪ್ರಾಚೀನ ಮಾಯನ್‌ ನಾಗರೀಕತೆಯ ಪ್ರಸಿದ್ಧ ನಗರವೊಂದರ ಅವಶೇಷಗಳನ್ನು ಪತ್ತೆ ಮಾಡಿದ್ದಾರೆ.
ಮೆರಿಡಾ ಎಂಬ ಸ್ಥಳದ ಬಳಿ ಕೈಗಾರಿಕಾ ಪಾರ್ಕ್ ನಿರ್ಮಾಣ ಮಾಡುತ್ತಿದ್ದಾಗ ಪ್ರಾಚೀನ ನಗರದ ಕುರುಹುಗಳು ಸಿಕ್ಕಿವೆ. ಸ್ಥಳದಲ್ಲಿ ಅರಮನೆಗಳು, ಪಿರಮಿಡ್‌ ಮಾದರಿಯ ರಚನೆಗಳು, ವಸತಿ ಸಂಕೀರ್ಣಗಳ ಅವಶೇಷಗಳು ಪತ್ತೆಯಾಗಿವೆ.
ಕ್ರಿ.ಶ. 600-900 ರ ಅವಧಿಯಲ್ಲಿ ಈ ನಗರದಲ್ಲಿ ಸುಮಾರು 4,000 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆಂದು ಪುರತತ್ವ ಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ಇಲ್ಲಿ ವಿಶಾಲವಾದ ನೆಲಮಾಳಿಗೆ, ಮೆಟ್ಟಿಲುಗಳನ್ನು ಹೊಂದಿದ್ದ ಅರಮನೆಯಂತಹ ಕಟ್ಟಡದ ಅವಶೇಷಗಳು ಪತ್ತೆಯಾಗಿದೆ. ಇವುಗಳಲ್ಲಿ ಗಣ್ಯರಾದ ಪುರೋಹಿತರು ವಾಸಿಸುತ್ತಿದ್ದರು.
ನಗರದ ಹೊರಭಾಗದಲ್ಲಿ ಪತ್ತೆಯಾದ ಸಣ್ಣ ಕಟ್ಟಡಗಳಲ್ಲಿ ಸಾಮಾನ್ಯ ಜನರು ವಾಸಿಸುತ್ತಿದ್ದರು ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಆ ಪ್ರದೇಶಕ್ಕೆ ಸಮೀಪದಲ್ಲಿಯೇ ವಯಸ್ಕರು ಮತ್ತು ಮಕ್ಕಳ ಸಮಾಧಿ ಸ್ಥಳ ಸಹ ಪತ್ತೆಯಾಗಿದೆ.
ಜೊತೆಗೆ ಸಮುದ್ರ ಜೀವಿಗಳ ಅವಶೇಷಗಳು ಸಹ ಪತ್ತೆಯಾಗಿದ್ದು, ಜನರು ಜೀವನೋಪಾಯಕ್ಕಾಗಿ ಕೃಷಿ ಜೊತೆಗೆ ಮೀನುಗಾರಿಕೆಯನ್ನು ಅವಲಂಬಿಸಿದ್ದ ವಿಚಾರ ದೃಢಪಟ್ಟಿದೆ ಎಂದು ಪುರಾತತ್ವ ಇಲಾಖೆಯ ತಜ್ಞರು ಮಾಹಿತಿ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!