ಆರ್ಚರಿ ವಿಶ್ವಕಪ್​ ಫೈನಲ್: ಬೆಳ್ಳಿ ಗೆದ್ದು ಸಂಭ್ರಮಿಸಿದ ಭಾರತದ ಪ್ರಥಮೇಶ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆರ್ಚರಿ ವಿಶ್ವಕಪ್​ ಫೈನಲ್ ನಲ್ಲಿ ಭಾರತದ ಪ್ರಥಮೇಶ್​ ಬೆಳ್ಳಿ ಪದಕ ಗೆದ್ದಿದ್ದಾರೆ.

ಶನಿವಾರ ನಡೆದ ವಿಶ್ವಕಪ್​ ಪಂದ್ಯದ ಪುರುಷರ ವಿಭಾಗದ ಆರ್ಚರಿ ಕಾಂಪೌಂಡ್ ಸ್ಪರ್ಧೆಯಲ್ಲಿ ಪ್ರಥಮೇಶ್​​ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸುವಲ್ಲಿ ಎಡವಿದರು. ಇದರಿಂದ ಫೈನಲ್​ನಲ್ಲಿ ಬೆಳ್ಳಿಗೆ ತೃಪ್ತಿ ಪಡಬೇಕಾಯಿತು.

ಡೆನ್ಮಾರ್ಕ್‌ನ ಮಥಿಯಾಸ್ ಫುಲ್ಲರ್ಟನ್ ವಿರುದ್ಧ ರೋಚಕ ಹಣಾಹಣಿಯಲ್ಲಿ ಐದು ಸೆಟ್‌ಗಳ ನಂತರ 148-148 ಅಂಕದಿಂದ ಟೈನೊಂದಿಗೆ ಮುಕ್ತಾಯಗೊಂಡಿತು. ಇದಾದ ನಂತರ ನಡೆದ ಟೈ ಬ್ರೇಕರ್​​ನಲ್ಲೂ ಇಬ್ಬರು 10 ಅಂಕವನ್ನು ಗಳಿಸಿದರು. ಆದರೆ ಫುಲ್ಲರ್ಟನ್ ಅವರು ವೃತ್ತದ ಮಧ್ಯ ಕೇಂದ್ರವನ್ನು ಛೇದಿಸಿದ್ದರಿಂದ ಚಿನ್ನದ ಪದಕಕ್ಕೆ ಮುತ್ತಿಟ್ಟರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here