ಕಾಫಿ ಬಿಟ್ಟು ಇರೋಕಾಗತ್ತಾ ಬೆಂಗಳೂರಿಗರೇ? ಇನ್ಮುಂದೆ Coffee ದರ ಇನ್ನಷ್ಟು ಹೆಚ್ಚಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಾಜಧಾನಿ ಬೆಂಗಳೂರಿಗರಿಗೆ ತಿಂಡಿಯ ಜೊತೆ ಒಂದು ಲೋಟ ಕಾಫಿ ಬೇಕೇಬೇಕು, ಮೀಟಿಂಗ್‌ನಲ್ಲಿಯೂ ಮಕಾಫಿ, ಕೆಲಸದ ಆಯಾಸ ಆರಿಸಲು ಕಾಫಿ ಬೇಕು, ಫ್ರೆಂಡ್ಸ್‌ ಜೊತೆ ಮೀಟ್‌ಗೂ ಕಾಫಿ ಹಾಗೂ ಡೇಟಿಂಗ್‌ಗೂ ಕಾಫಿ ಬೇಕಿದೆ. ಈ ಮಧ್ಯೆ ಇನ್ನು ಬೆಂಗಳೂರಿನಲ್ಲಿ ಕಾಫಿ ಬೆಲೆ ಹೆಚ್ಚಾಗಲಿದೆ ಎನ್ನಲಾಗಿದೆ.

ಬೆಂಗಳೂರಿನಲ್ಲಿರುವ ಕೆಫೆಗಳು ಮತ್ತು ರೆಸ್ಟೊರೆಂಟ್‌ಗಳು ಕಾಫಿ ಬೆಲೆಯನ್ನು ಇನ್ನಷ್ಟು ಹೆಚ್ಚಿಸಲು ಮುಂದಾಗಿರುವುದಾಗಿ ವರದಿಯಾಗಿದೆ. ಕಾಫಿ ಬೀಜದ ದರ ಹೆಚ್ಚಳವೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಫಿ ಬೀಜದ ಬೆಲೆ ಕಳೆದ ಮೂರು ತಿಂಗಳಲ್ಲಿ ಶೇ 60ರಷ್ಟು ಏರಿಕೆಯಾಗಿದೆ. ಕರ್ನಾಟಕವು ಭಾರತದ ಅತಿದೊಡ್ಡ ಕಾಫಿ ಬೆಳೆಯುವ ರಾಜ್ಯವಾಗಿದ್ದು, ಇಲ್ಲಿಯೂ ದರ ಹೆಚ್ಚಳವಾಗಿದೆ. ಜತೆಗೆ, ಭಾರತದಾದ್ಯಂತ ಕಾಫಿ ಬೀಜದ ಬೆಲೆ ಏರಿಕೆಯಾಗುತ್ತಿದೆ. ಕಳೆದ ಮೂರು ತಿಂಗಳಲ್ಲಿ ಹುರಿದ ಕಾಫಿ ಬೀಜದ ಬೆಲೆ 100-200 ರೂ.ಗಳಷ್ಟು ಏರಿಕೆಯಾಗಿದೆ. ಪ್ರಸ್ತುತ ಹುರಿದ ಕಾಫಿ ಬೀಜದ ಬೆಲೆ 1 ಕೆಜಿಗೆ 800 ರಿಂದ 1,200 ರೂ. ಇದೆ.

ಹಲಸೂರು ಮತ್ತು ಕೋರಮಂಗಲದಲ್ಲಿ ಶಾಖೆಗಳನ್ನು ಹೊಂದಿರುವ ಮೇವರಿಕ್ ಮತ್ತು ಫಾರ್ಮರ್‌ನಲ್ಲಿ ಹೊಸ ವರ್ಷದಲ್ಲಿ ಕಾಫಿ ಬೆಲೆ ಶೇಕಡಾ 10 ರಿಂದ 20 ರಷ್ಟು ಏರಿಕೆಯಾಗಲಿವೆ. ನಮಗೆ ಪ್ರಸ್ತುತ ಸ್ವಲ್ಪ ಹಿನ್ನಡೆಯಾಗುತ್ತಿದೆ. ಇದನ್ನು ಎದುರಿಸಲು ನಾವು ಹೊಸ ಬೆಲೆ ನಿಗದಿಪಡಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.

ದಿ ಕೆಫೀನ್ ಬಾರ್‌ನ ಚರ್ಚ್ ಸ್ಟ್ರೀಟ್‌ ಮತ್ತು ಜಯನಗರದಲ್ಲಿ ಔಟ್‌ಲೆಟ್‌ಗಳಲ್ಲಿ ಮುಂದಿನ 10 ದಿನಗಳಲ್ಲಿ ಒಂದು ಕಪ್ ಕ್ಯಾಪುಸಿನೊ ಕಾಫಿ ದರ 200 ರೂ.ನಿಂದ 220 ರೂ.ಗೆ ಹೆಚ್ಚಳವಾಗಲಿದೆ. ಕೆಫೆಯು ಅರೇಬಿಕಾ ಕಾಫಿ ಬೀಜವನ್ನು ಬಳಸುತ್ತದೆ. ಬೆಲೆಗಳು ಶೇಕಡಾ 40 ರಷ್ಟು ಹೆಚ್ಚಾಗುವುದರೊಂದಿಗೆ, ನಾವು ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!