ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರ ಪ್ರತಿ ಲೀಟರ್‌ಗೆ 2 ರೂಪಾಯಿ ಪೆಟ್ರೋಲ್ ಹಾಗೂ ಡಿಸೇಲ್ ಅಬಕಾರಿ ಶುಲ್ಕ ಹೆಚ್ಚಳ ಮಾಡಿದೆ.
ಆದ್ರೆಇದು ಜನ ಸಾಮಾನ್ಯರಿಗೆ ಯಾವುದೇ ರೀತಿಯಿಂದಲೂ ಬರೆ ಬೀಳಲ್ಲ. ಈ ಅಬಕಾರಿ ತೆರಿಗೆಯನ್ನು ತೈಲ ಕಂಪನಿಗಳ ಮೇಲೆ ಹಾಕಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಇದರಿಂದ ಜನ ಸಾಮಾನ್ಯರು ಆತಂಕಪಡಬೇಕಿಲ್ಲ ಎಂದು ಹೇಳಲಾಗಿದೆ.
ಕೇಂದ್ರ ಸರ್ಕಾರ ತೈಲದ ಮೇಲೆ ಅಬಕಾರಿ ಶುಲ್ಕ ಹೆಚ್ಚಳ ಮಾಡಿದ್ದು ಇಂದು ಮಧ್ಯರಾತ್ರಿಯಿಂದಲೇ ದೇಶಾದ್ಯಂತ ಜಾರಿಗೆ ಬರುತ್ತಿದೆ. ಏಪ್ರಿಲ್ 8ರಿಂದ ಕೇಂದ್ರ ಸರ್ಕಾರ 2 ರೂಪಾಯಿ ಹೆಚ್ಚುವರಿ ಅಬಕಾರಿ ತೆರಿಗೆಯನ್ನ ತೈಲ ಕಂಪನಿಗಳ ಮೇಲೆ ಹಾಕಿದೆ. ಪರಿಷ್ಕೃತ ಅಬಕಾರಿ ತೆರಿಗೆಯಿಂದಾಗಿ ಪೆಟ್ರೋಲ್ ಮೇಲೆ ಲೀಟರ್ 13 ರೂಪಾಯಿ. ಡಿಸೇಲ್ ಮೇಲೆ ಲೀಟರ್‌ಗೆ 10 ರೂಪಾಯಿ ವಿಧಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮೊನ್ನೆ ಮೊನ್ನೆಯಷ್ಟೇ ಕರ್ನಾಟಕ ಸರ್ಕಾರ ಡಿಸೇಲ್ ಮೇಲೆ ಎರಡು ರೂಪಾಯಿ ಹೆಚ್ಚಳ ಮಾಡಿತ್ತು. ಇದೀಗ ಸರ್ಕಾರ ಏಪ್ರಿಲ್ 7 ರಂದು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ ತಲಾ 2 ರೂಪಾಯಿ ಹೆಚ್ಚಿಸಿದೆ. ಜಾಗತಿಕ ತೈಲ ಬೆಲೆಗಳಲ್ಲಿನ ಏರಿಳಿತಗಳಿಂದ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.