ಸ್ಲೀಪ್‌ ಡಿವೋರ್ಸ್‌ ತೆಗೆದುಕೊಳ್ಳೋದ್ರಲ್ಲಿ ಭಾರತೀಯರೇ ನಂ.1, ನಿದ್ರಾ ವಿಚ್ಛೇದನ ಅಂದ್ರೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಭಾರತದಲ್ಲಿ ಸ್ಲೀಪ್‌ ಡಿವೋರ್ಸ್‌ ಕಾನ್ಸೆಪ್ಟ್‌ ಜಾರಿಗೆ ಬಂದಿದೆ, ಹೆಚ್ಚಿನ ಜನರು ಸ್ಲೀಪ್‌ ಡಿವೋರ್ಸ್‌ ತೆಗೆದುಕೊಳ್ಳುತ್ತಿದ್ದಾರೆ.ಇದಕ್ಕೆ ಕಾರಣ ಏನು? ಸ್ಲೀಪ್‌ ಡಿವೋರ್ಸ್‌ ಅಂದ್ರೇನು? ಇಲ್ಲಿದೆ ಡೀಟೇಲ್ಸ್‌..

ದಂಪತಿ ತಮ್ಮ ಅಗತ್ಯಗಳು ಮತ್ತು ಆರಾಮಕ್ಕೆ ಅನುಗುಣವಾಗಿ ಬೇರೆ ಬೇರೆಯಾಗಿ ಮಲಗಲು ಇದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅಂಕಿಅಂಶಗಳ ಪ್ರಕಾರ ʼಸ್ಲೀಪಿಂಗ್ ಡಿವೋರ್ಸ್ʼ ಪಡೆಯುವವರಲ್ಲಿ ಭಾರತೀಯರು ಮುಂದಿದ್ದಾರೆ. ಹಾಗಾದ್ರೆ ಸ್ಲೀಪಿಂಗ್ ವಿಚ್ಛೇದನಕ್ಕೆ ಕಾರಣಗಳೇನು? ಇದರಿಂದಾಗುವ ಪ್ರಯೋಜನಗಳೇನು?

ನಿದ್ರಾ ವಿಚ್ಛೇದನವು, ದಂಪತಿ ತಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಪ್ರತ್ಯೇಕವಾಗಿ ಮಲಗುವುದನ್ನು ಆಯ್ಕೆ ಮಾಡುವ ಪರ್ಯಾಯ ವಿಧಾನವಾಗಿದೆ. ಇದು ಬೇರೆ ಬೇರೆ ಹಾಸಿಗೆಗಳಲ್ಲಿ ಮಲಗುವುದು, ಬೇರೆ ಕೋಣೆಯಲ್ಲಿ ಮಲಗುವುದು ಅಥವಾ ವಿಭಿನ್ನ ವೇಳಾಪಟ್ಟಿಗಳಲ್ಲಿ ಮಲಗುವುದಾಗಿದೆ. ಇದರರ್ಥ ಗಂಡ ಹೆಂಡತಿ ಮಧ್ಯೆ ಸಮಸ್ಯೆ ಇದೆ ಎಂಬುದಲ್ಲ. ಗೊರಕೆ ಸಮಸ್ಯೆ, ವಿಭಿನ್ನ ನಿದ್ರೆಯ ಆದ್ಯತೆಗಳಂತಹ ಸಮಸ್ಯೆಗಳನ್ನು ಸಮರ್ಥವಾಗಿ ನಿರ್ವಹಿಸಲು ಅನೇಕ ದಂಪತಿಗಳು ಈ ವಿಧಾನವನ್ನು ಪಾಲಿಸುತ್ತಿದ್ದಾರೆ. ಪ್ರತ್ಯೇಕವಾಗಿ ಮಲಗುವುದು ಪತಿ ಪತ್ನಿಯರ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ ಎನ್ನುವುದನ್ನು ಅಧ್ಯಯನವು ಹೇಳುತ್ತದೆ.

ರೆಸ್‌ಮೆಡ್‌ನ 2025 ರ ಜಾಗತಿಕ ನಿದ್ರೆಯ ಸಮೀಕ್ಷೆಯ ಪ್ರಕಾರ, ನಿದ್ರೆ ವಿಚ್ಛೇದನದಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ. ಭಾರತದಲ್ಲಿ  78% ರಷ್ಟು ದಂಪತಿಗಳು ಸ್ಲೀಪ್ ಡಿವೋರ್ಸ್ ಪ್ರವೃತ್ತಿಯನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಇನ್ನು ಉಳಿದಂತೆ ಚೀನಾದಲ್ಲಿ  67% ಮತ್ತು ದಕ್ಷಿಣ ಕೊರಿಯಾ 65% ರಷ್ಟು ದಂಪತಿಗಳು ಸ್ಲೀಪ್ ಡಿವೋರ್ಸ್ ಮೊರೆ ಹೋಗುತ್ತಿದ್ದಾರೆ ಎನ್ನುವುದು ಸಮೀಕ್ಷೆಯಿಂದ ಬಹಿರಂಗವಾಗಿದೆ. ಈ ಸಮೀಕ್ಷೆಗೆ 13 ದೇಶಗಳಲ್ಲಿ 30,000 ಕ್ಕೂ ಹೆಚ್ಚು ಜನರನ್ನು ಒಳಪಡಿಸಲಾಗಿದ್ದು, ಈ ಸಮೀಕ್ಷೆಯು ಜಾಗತಿಕ ನಿದ್ರೆಯ ಬಿಕ್ಕಟ್ಟನ್ನು ಬಹಿರಂಗಪಡಿಸಿದೆ. ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ 50% ರಷ್ಟು ದಂಪತಿಗಳು ಒಟ್ಟಿಗೆ ಮಲಗಲು ಇಷ್ಟ ಪಟ್ಟರೆ, ಇನ್ನು 50% ರಷ್ಟು ಪ್ರತ್ಯೇಕವಾಗಿ ಮಲಗಲು ಇಷ್ಟಪಡುತ್ತಾರೆ ಎನ್ನಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!