September 26, 2026
Saturday, September 26, 2026
spot_img

ಅಮ್ಮಾ ತಿನ್ನೋಕೆ ಏನಾದ್ರೂ ಕೊಡು ಎಂದು ಮಕ್ಕಳು ಕಾಡಿಸ್ತಿದ್ದಾರಾ? ಸಿಂಪಲ್‌ ಆದ ಸಿಹಿ ತಿಂಡಿ ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು

ಗೋಡಂಬಿ
ಜೇನುತುಪ್ಪ
ಬೆಣ್ಣೆ
ಚಿಲ್ಲಿ ಫ್ಲೇಕ್ಸ್‌
ಖಾರದಪುಡಿ
ಉಪ್ಪು

ಮಾಡುವ ವಿಧಾನ

ಮೊದಲು ದೊಡ್ಡ ಬೌಲ್‌ಗೆ ಗೋಡಂಬಿ ಹಾಕಿ, ಜೊತೆಗೆ ಮೆಲ್ಟ್‌ ಆಗಿರುವ ಬೆಣ್ಣೆ, ಜೇನುತುಪ್ಪ, ಉಪ್ಪು ಹಾಗೂ ಚಿಲ್ಲಿ ಫ್ಲೇಕ್ಸ್‌ ಹಾಕಿ

ಎಲ್ಲವನ್ನು ಕೈಯಲ್ಲಿ ಚೆನ್ನಾಗಿ ಮಿಕ್ಸ್‌ ಮಾಡಿ. ಎಲ್ಲ ಕೋಟಿಂಗ್‌ ಚೆನ್ನಾಗಿ ಹತ್ತಿದೆಯಾ ನೋಡಿಕೊಳ್ಳಿ.

ನಂತರ ಅವನ್‌ ಅಥವಾ ಏರ್‌ಫ್ರೈಯರ್‌ ಮೇಲೆ ಒಂದು ಬಟರ್‌ ಪೇಪರ್‌ ಇಡಿ. ಇದರ ಮೇಲೆ ಗೋಡಂಬಿಯನ್ನು ಹರಡಿ.

೮-೧೨ ನಿಮಿಷ ಅವುಗಳನ್ನು ಹುರಿಯಿರಿ, ಹೆಚ್ಚು ಸಮಯ ಬಿಸಿ ಮಾಡಿದರೆ ಜೇನುತುಪ್ಪದ ರುಚಿ ಹಾಳಾಗುತ್ತದೆ.

ನಂತರ ಇದನ್ನು ತಣ್ಣಗಾಗಲು ಬಿಟ್ಟು ಸ್ಟೋರ್‌ ಮಾಡಿದರೆ, ಮಕ್ಕಳು ಕೇಳಿದಾಗೆಲ್ಲಾ ಸಿಹಿ ಹಾಗೂ ಖಾರ ಇರುವ ಗೋಡಂಬಿಯನ್ನು ನೀಡಬಹುದು

Must Read