ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದ್ಯ ಓಡುತ್ತಿರುವ ಜನಗತ್ತಿನಲ್ಲಿ ಜನರ ಜೀವನ ಶೈಲಿ ಸಂಪೂರ್ಣ ಬದಲಾಗಿದೆ. ಎಲ್ಲವೂ ಬೇಗ ಬೇಗ ಆಗಬೇಕು. ಅದನ್ನು ಕೆಲಸ ಆಗಬಹುದು, ಆಹಾರ ಸೇವನೆ ಆಗಬಹುದು. ಅಡುಗೆ ಮಾಡೋಕೆ ಸಮಯವಿಲ್ಲ, ಹಾಗಾಗಿಯೇ ಹೊರಗಡೆ ಫಾಸ್ಟ್ ಫುಡ್ ಸೆಂಟರ್ಗಳ ಹವಾ ಜೋರಾಗಿದೆ. ಸಮಯಕ್ಕೆ ಸರಿಯಾಗಿ ಊಟ ಮಾಡದ ಕಾರಣ ಅನಾರೋಗ್ಯ ಸಮಸ್ಯೆಗಳೂ ಉಂಟಾಗುತ್ತಿವೆ. ಇನ್ನು ಸಮಯ ಇಲ್ಲ ಎನ್ನುವ ಕಾರಣಕ್ಕೆ ನಿಂತೇ ಗಬಗಬ ತಿಂದು ಕೆಲಸಕ್ಕೆ ಹೋಗುವ ಜರೂ ಹೆಚ್ಚಾಗಿದ್ದಾರೆ.
ನಿಂತು ಊಟ ಮಾಡುವುದರಿಂದ ಆಗುವ ದುಷ್ಪರಿಣಾಮಗಳೇನು?
- ನಾವು ನಿಂತಲ್ಲೇ ಆಹಾರ ಸೇವಿಸಿದಾಗ ಕರುಳು ಸಂಕುಚಿತಗೊಳ್ಳುತ್ತದೆ. ಪರಿಣಾಮವಾಗಿ ಆಹಾರ ಜೀರ್ಣವಾಗುವುದಿಲ್ಲ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.
- ನಿಂತಲ್ಲೇ ಊಟ ಮಾಡುವುದರಿಂದ ಕಾಲು ಮತ್ತು ಸೊಂಟದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿಂತುಕೊಂಡು ತಿನ್ನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.
- ಗಮನ ಊಟದ ಮೇಲಿರದೆ ಸುತ್ತ-ಮುತ್ತ ನೋಡುವ ಸಾಧ್ಯತೆ ಹೆಚ್ಚು
- ನಿಂತು ಊಟ ಮಾಡಿದಾಗ ಅತಿಯಾಗಿ ತಿನುವಂತೆ ಮಾಡುತ್ತದೆ. ಎಷ್ಟು ತಿಂದರೂ ಇನ್ನೂ ಬೇಕು ಎನಿಸುವ ಮನಸ್ಥಿತಿ ಇರುತ್ತದೆ.
- ನಿಂತು ಹೆಚ್ಚು ಆಹಾರ ಸೇವಿಸುವುದರಿಂದ ಜೀರ್ಣಾಂಗ ವ್ಯಸ್ಥೆಯ ಮೇಲೆ ನೇರ ಪರಿಣಾಮ ಬೀರುತ್ತದೆ.
- ಜೀರ್ಣವಾಗದ ಕಾರ್ಬೋಹೈಡ್ರೇಟ್ಗಳು ಕರುಳಿನಲ್ಲಿ ಹುದುಗುವಿಕೆಗೆ ಕಾರಣಾವಾಗಬಹುದು
- ಆಹಾರ ಗಂಟಲಿನಿಂದ ನೇರವಾಗಿ ಹೊಟ್ಟೆಗೆ ಬೀಳುತ್ತದೆ. ಇದರಿಂದ ಅನ್ನನಾಳದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.ಅಲ್ಸರ್ ನಂತಹ ಸಮಸ್ಯೆಗಳೂ ಬರುತ್ತವೆ.