ಟೀ ಶರ್ಟ್‌ ಮೇಲೆ ಇದೆಂಥಾ ಲೈನ್ಸ್‌? ಧನಶ್ರೀಗೆ ಕೌಂಟರ್‌ ಕೊಡ್ತಿದ್ದಾರಾ ಚಹಾಲ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಟಿ ಧನಶ್ರೀ ಹಾಗೂ ಕ್ರಿಕೆಟರ್‌ ಯಜುವೇಂದ್ರ ಚಹಾಲ್‌ ಪರ್ಸನಲ್‌ ಲೈಫ್‌ ಬೆಳಕಿಗೆ ಬಂದಿದೆ, ದಿನಗಳಿಂದ ಡಿವೋರ್ಸ್‌ಗಾಗಿ ಕಾಯುತ್ತಿದ್ದ ದಂಪತಿಗೆ ಕಡೆಗೂ ಕೋರ್ಟ್‌ ದೂರಾಗುವಂತೆ ಹೇಳಿದೆ.

ಇತ್ತ ಡಿವೋರ್ಸ್‌ ದಿನವೇ ಹಾಡೊಂದನ್ನು ಧನಶ್ರೀ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಪತಿ, ಪತ್ನಿಯ ಮೇಲೆ ಚೀಟ್‌ ಮಾಡುವ ವಿಷಯ ಇದೆ. ಚಹಾಲ್‌ ಅಫೇರ್‌ ಇಟ್ಟುಕೊಂಡಿದ್ದರಾ ಎನ್ನುವ ಪ್ರಶ್ನೆ ಎಲ್ಲರಲ್ಲಿ ಮೂಡಿದೆ. ಇದೀಗ ಇದಕ್ಕೆ ಉತ್ತರವಾಗಿ ಚಹಾಲ್‌ ಟೀ ಶರ್ಟ್‌ ಬರಹ ಬರೆದುಕೊಂಡಿದ್ದಾರೆ.

ತಮ್ಮ ಟೀ ಶರ್ಟ್‌ ಮೇಲೆ Be your own sugar daddy ಎನ್ನುವ ಲೈನ್ಸ್‌ ಇದೆ. ನಿಮ್ಮ ಅಗತ್ಯತೆಗಳು ಮತ್ತು ಆಸೆಗಳಿಗಾಗಿ ಶ್ರೀಮಂತ ವ್ಯಕ್ತಿಯನ್ನು ಅವಲಂಬಿಸುವ ಬದಲು ಆರ್ಥಿಕವಾಗಿ ಸ್ವತಂತ್ರರಾಗಿ ಮತ್ತು ಸ್ವಾವಲಂಬಿಯಲಾಗಿ ಎಂಬ ಅರ್ಥವನ್ನು ಈ ಸಾಲುಗಳು ನೀಡುತ್ತವೆ. ಈ ಸಾಲುಗಳ ಮೂಲಕ ಅವರು ಏನನ್ನು ಹೇಳ ಹೊರಟಿದ್ದಾರೆ ಎಂಬ ಪ್ರಶ್ನೆ ಮೂಡಿದೆ.

ಧನಶ್ರೀ ಅವರಿಗೆ ಚಾಹಲ್ ಅವರು 4.35 ಕೋಟಿ ರೂಪಾಯಿ ಜೀವನಾಂಶ ನೀಡಿದ್ದಾರೆ ಎನ್ನಲಾಗಿದೆ. ಈ ಹಣ ಪಡೆಯಲು ಧನಶ್ರೀ ಇಷ್ಟೆಲ್ಲ ಪ್ಲ್ಯಾನ್ ಮಾಡಿದರು ಎಂಬ ಆರೋಪಗಳನ್ನು ಕೆಲವರು ಮಾಡಿದ್ದಾರೆ. ಜೀವನಾಂಶದ ವಿಚಾರದ ಕಾರಣಕ್ಕೆ ಚಾಹಲ್ ಈ ರೀತಿಯ ಶರ್ಟ್ ಧರಿಸಿ ಬಂದರೆ ಎನ್ನುವ ಪ್ರಶ್ನೆ ಅನೇಕರಿಗೆ ಹುಟ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!