ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೌತ್ ಇಂಡಿಯನ್ ಸಿನಿಮಾದಲ್ಲಿ ಟಾಪ್ ನಟಿಯರಲ್ಲಿ ಸಮಂತಾ ಕೂಡ ಒಬ್ಬರು. ನಾಗ ಚೈತನ್ಯ ಜೊತೆ ಲವ್ ಮಾಡಿ ಮದುವೆ ಆಗಿ, ನಾಲ್ಕು ವರ್ಷಕ್ಕೆ ಡಿವೋರ್ಸ್ ಮಾಡಿಕೊಂಡು ಈಗ ಸಿಂಗಲ್ ಆಗಿ ಇರೋ ಇವರ ಫೋನಿನಲ್ಲಿ “Love” ಅಂತ ಸೇವ್ ಆಗಿರೋ ನಂಬರ್ ವೈರಲ್ ಆಗಿದೆ.
ಆ ನಂಬರ್ ಯಾರದ್ದು ಎಂದು ನೆಟ್ಟಿಗರು ರಿಸರ್ಚ್ ಮಾಡಿದ್ದು, ಅದು ಸಮಂತಾ ಅಪ್ಪನ ನಂಬರ್ ಅಂತ ಗೊತ್ತಾಗಿದೆ. ಸಮಂತಾ ಲೈಫ್‌ನಲ್ಲಿ ಅಪ್ಪ ತುಂಬಾನೇ ಮುಖ್ಯವಾದ ವ್ಯಕ್ತಿಯಾಗಿದ್ರು ಎಂದು ಹೇಳುತ್ತಿರುತ್ತಾರೆ ಸ್ಯಾಮ್.
ಆಂಗ್ಲೋ-ಇಂಡಿಯನ್ ಆಗಿದ್ದ ಜೋಸೆಫ್ ಪ್ರಭು 2024 ನವೆಂಬರ್‌ನಲ್ಲಿ ತೀರಿಕೊಂಡರು. ಅದಕ್ಕೆ ಸ್ಯಾಮ್ ತುಂಬಾನೇ ಎಮೋಷನಲ್ ಆಗಿದ್ದರು. ಅವರ ನೆನಪಿಗಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಕೂಡ ಹಾಕಿದ್ದರು.