ಮನೆಯಲ್ಲಿ ಟೀನೇಜ್ ಮಕ್ಕಳಿದ್ದಾರಾ? ಇವರು ತಪ್ಪು ದಾರಿ ಹಿಡಿಯದೇ ನಿಮ್ಮ ಸ್ನೇಹಿತರಾಗೋಕೆ ಹೀಗೆ ಮಾಡಿ…

ಚಿಕ್ಕ ಮಕ್ಕಳನ್ನು ಬೇಕಾದರೂ ಸಂಭಾಳಿಸಬಹುದು ಆದರೆ ಟೀನೇಜರ‍್ಸ್ ಸಂಭಾಳಿಸೋದು ಕಷ್ಟದ ಕೆಲಸ. ಎಲ್ಲ ಗೊತ್ತು ಎನ್ನುವ ವಯಸ್ಸಲ್ಲ, ಹಾಗಂತ ಏನೂ ಗೊತ್ತಿಲ್ಲ ಎನ್ನಲೂ ಆಗುವುದಿಲ್ಲ. ಇವರು ದಾರಿ ತಪ್ಪುವುದು ಇದೇ ವಯಸ್ಸಿನಲ್ಲಿ. ಇವರ ಸ್ನೇಹಿತರಾಗಿದ್ದರೆ ಮಾತ್ರ ಏನೂ ಸಮಸ್ಯೆ ಇಲ್ಲದೆ ಈ ವಯಸ್ಸು ದಾಟಬಹುದು.. ಹೇಗಿರಬೇಕು ನೋಡಿ..

  • ನೀವು ಪೋಷಕರು ಹೌದು, ಆದರೆ ಅವರ ಸ್ನೇಹಿತರೂ ಹೌದು, ಬೇರೆಯವರ ಬಳಿ ಹೇಳಿಕೊಳ್ಳಲು ಆಗದ್ದನ್ನು ನಿಮ್ಮ ಬಳಿ ಅವರು ಶೇರ್ ಮಾಡಬೇಕು. ಹಾಗೆ ನಡೆದುಕೊಳ್ಳಿ.
  • ನಿಮ್ಮ ಟೀನೇಜ್ ನೆನಪು ಮಾಡಿಕೊಳ್ಳಿ. ಆಗ ನಿಮಗೆ ಯಾವ ರೀತಿ ಮಾರ್ಗದರ್ಶನ ಬೇಕಿತ್ತು? ಇವರಿಗೆ ಅದೇ ರೀತಿ ಮಾರ್ಗದರ್ಶನ ನೀಡಿ.
  • ಒಟ್ಟಾಗಿ ಹೆಚ್ಚು ಕಾಲ ಕಳೆಯಿರಿ. ಟೀನೇಜರ‍್ಸ್ ಮೊಬೈಲ್ ಹಾಗೂ ಫ್ರೆಂಡ್ಸ್‌ನ್ನು ನಿಮಗಿಂತ ಹೆಚ್ಚು ಇಷ್ಟಪಡುತ್ತಾರೆ. ಅದರ ಜೊತೆ ಕಡಿಮೆ ಸಮಯ ನಿಮ್ಮ ಜೊತೆ ಹೆಚ್ಚು ಸಮಯ ಕಳೆಯಲು ಏನಾದರೂ ಐಡಿಯಾ ಮಾಡಿ.
  • ಅವರಿಗೆ ಹೆಚ್ಚು ಫ್ರೀಡಂ ಬೇಕು. ಖಾಸಗಿತನಕ್ಕೆ ಹಪಹಪಿಸುತ್ತಾರೆ. ಅದನ್ನು ತಕ್ಕಮಟ್ಟಿಗೆ ನೀಡಿ, ಸದಾ ಒಂದು ಕಣ್ಣಿಟ್ಟಿರಿ.
  • ಮಕ್ಕಳ ಎಲ್ಲ ಆಕ್ಟಿವಿಟಿ ಮೇಲೆ ಗಮನ ಇರಲಿ. ಧೂಮಪಾನ, ಮದ್ಯಪಾನ, ಡ್ರಗ್ಸ್, ಸೆಕ್ಸ್ ಎಲ್ಲ ತೊಂದರೆಗಳು ಇಲ್ಲಿಂದಲೇ ಆರಂಭ. ಅವರ ದಿನಚರಿ ಮೇಲೆ ನಿಗಾ ಇಡಿ.
  • ಎಷ್ಟೇ ಬ್ಯುಸಿಯಾಗಿರಲಿ. ಒಟ್ಟಿಗೇ ಊಟ ತಿಂಡಿ ಮಾಡಿ, ಮಾತನಾಡಿ, ತಮಾಷೆ ಮಾಡಿ, ಬಾಂಧವ್ಯ ಗಟ್ಟಿ ಮಾಡಿ.
  • ಯಾವಾಗಲೂ ಮಾತುಕತೆ ಜಾರಿಯಿರಲಿ. ಕಾಲೇಜಿನಲ್ಲಿ ಏನಾಯ್ತು? ಟ್ಯೂಷನ್‌ನಲ್ಲಿ ಏನಾಯ್ತು? ಅವರ ಸ್ನೇಹಿತರು ಯಾರು? ಅವರ ಬಗ್ಗೆ ವಿಚಾರಿಸಿ. ಹೀಗೆ ಎಲ್ಲ ಮಾಹಿತಿ ನಿಮ್ಮಲ್ಲಿರಲಿ.
  • ಅವರು ಏನೇ ಮಾಡಿದರೂ ಎನ್‌ಕರೇಜ್ ಮಾಡಿ, ಅವರಿಗೆ ಆಸಕ್ತಿ ಇರುವ ವಿಷಯಕ್ಕೆ ಒತ್ತು ನೀಡಿ. ಒತ್ತಡ ಹಾಕಬೇಡಿ.
  • ಮಕ್ಕಳ ಫೋನ್, ಲ್ಯಾಪ್‌ಟಾಪ್ ಪಾಸ್‌ವರ್ಡ್ ನಿಮಗೂ ತಿಳಿದಿರಲಿ.
  • ಗ್ರೌಂಡ್ ರೂಲ್ಸ್ ಸೆಟ್ ಮಾಡಿ, ಇದಕ್ಕೆ ಮಕ್ಕಳ ಸಹಾಯ ತೆಗೆದುಕೊಳ್ಳಿ. ತಪ್ಪು ಮಾಡಿದರೆ ಏನು ಶಿಕ್ಷೆ ಕೊಡಬಹುದು ಎಂದು ಅವರನ್ನೇ ಕೇಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!