ಯು ಪಿ ಐ ವಹಿವಾಟಿಗೆ ಚಾರ್ಜ್ ಆಗುತ್ತಾ? ಸರ್ಕಾರ ಹೇಳ್ತಿರೋದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೇಶದ ಬಹುದೊಡ್ಡ ಡಿಜಿಟಲ್‌ ಹಣರವಾನೆಯ ವ್ಯವಸ್ಥೆಯಾದ ಯುಪಿಐ ಪಾವತಿ ಮೇಲೆ ಹೆಚ್ಚಿನ ಶುಲ್ಕಗಳನ್ನು ವಿಧಿಸಲಾಗುತ್ತದೆ ಎಂಬ ಸುದ್ದಿಗಳು, ಊಹಾಪೋಹಗಳು ಹರಿದಾಡುತ್ತಿರುವ ಬೆನ್ನಲ್ಲೇ ಕೇಂದ್ರವು ಸ್ಪಷ್ಟೀಕರಣ ನೀಡಿದ್ದು ಯಾವುದೇ ಶುಲ್ಕಗಳನ್ನು ವಿಧಿಸಲು ಸರ್ಕಾರ ಚಿಂತಿಸಿಲ್ಲ ಎಂದಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಹಣಕಾಸು ಸಚಿವಾಲಯವು “ಯುಪಿಐ (ಯುನೈಟೆಡ್‌ ಪೇಮೆಂಟ್ಸ್‌ ಇಂಟರ್‌ಫೇಸ್) ಸಾರ್ವಜನಿಕ ಅನುಕೂಲತೆ ಮತ್ತು ಉತ್ಪಾದಕತೆಗೆ ಸಹಾಯ ಮಾಡುವ ಮೂಲಕ ಆರ್ಥಿಕತೆಗೆ ಪೂರಕವಾಗಿರುವ ಉತ್ತಮ ಡಿಜಿಟಲ್‌ ವ್ಯವಸ್ಥೆಯಾಗಿದೆ. UPI ಸೇವೆಗಳಿಗೆ ಶುಲ್ಕವನ್ನು ವಿಧಿಸಲು ಸರ್ಕಾರ ಯಾವುದೇ ಪರಿಗಣನೆ ಮಾಡಿಲ್ಲ. ಯುಪಿಐ ಸೇವೆ ನೀಡುತ್ತಿರುವವರು ವೆಚ್ಚ ವಸೂಲಾತಿಯನ್ನು ಇತರ ವಿಧಾನಗಳ ಮೂಲಕ ಪೂರೈಸಬೇಕು” ಎಂದು ಹೇಳಿದೆ.

ಮುಂದುವರೆದು “ಸರ್ಕಾರವು ಕಳೆದ ವರ್ಷ ಡಿಜಿಟಲ್‌ ಪೇಮೆಂಟ್‌ ಪರಿಸರ ವ್ಯವಸ್ಥೆಗೆ ಹಣಕಾಸಿನ ನೆರವು ನೀಡಿತ್ತು ಮತ್ತು ಈ ವರ್ಷವೂ ಕೂಡ ಅದೇ ರೀತಿಯ ಘೋಷಣೆಗಳನ್ನು ಮಾಡಿದ್ದು ಆರ್ಥಿಕ ಮತ್ತು ಬಳಕೆದಾರ-ಸ್ನೇಹಿ ಪಾವತಿ ವೇದಿಕೆಗಳ ಪ್ರಚಾರವನ್ನು ಉತ್ತೇಜಿಸಿದೆ” ಎಂದು ಹಣಕಾಸು ಸಚಿವಾಲಯ ತನ್ನ ಟ್ವೀಟ್‌ ನಲ್ಲಿ ತಿಳಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!