ಮೂವತ್ತು ದಾಟಿದ ನಂತರದಿಂದ ಮುಖದ ಮೇಲೆ ಸುಕ್ಕುಗಳು ಬರೋದಕ್ಕೆ ಆರಂಭವಾಗುತ್ತವೆ. ಇವುಗಳನ್ನು ತಡೆಯಲು ಈ ಫೇಸ್‌ಪ್ಯಾಕ್ ಬಳಸಿ..
ಮೊಟ್ಟೆ, ಲೆಮನ್‌ಜ್ಯೂಸ್ ಪ್ಯಾಕ್
ಕೋಳಿ ಮೊಟ್ಟೆಯ ಬಿಳಿ ಭಾಗದಲ್ಲಿ ಕಂಡುಬರುವ ಪ್ರೊಟೀನ್ ನಮ್ಮ ಚರ್ಮದ ಎಲಾಸ್ಟಿಕ್ ಗುಣವನ್ನು ಹೆಚ್ಚಿಸುತ್ತದೆ ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.
ಲೆಮನ್ ಜ್ಯೂಸ್ ಅಥವಾ ನಿಂಬೆ ರಸ ತನ್ನಲ್ಲಿ ವಿಟಮಿನ್ ಸಿ ಅಂಶವನ್ನು ಒಳಗೊಂಡಿರುವ ಕಾರಣ ನಮ್ಮ ದೇಹ ಚರ್ಮಕ್ಕೆ ಸಹಕಾರಿಯಾದ ಕೊಲ್ಯಾಜನ್ ಉತ್ಪತ್ತಿ ಮಾಡು ವಂತೆ ಮಾಡಿ ಚರ್ಮವನ್ನು ಆರೋಗ್ಯಕರವಾಗಿ ಇರಿ ಸುತ್ತದೆ.
ಕ್ಯಾರೆಟ್ ಹಾಗೂ ಬಾದಾಮಿ ಎಣ್ಣೆ ಪ್ಯಾಕ್
ಮುಖದ ಮೇಲಿನ ಸುಕ್ಕುಗಳನ್ನು ನಿವಾರಣೆ ಮಾಡುವಲ್ಲಿ ಕ್ಯಾರೆಟ್ ಬಹಳ ಚೆನ್ನಾಗಿ ಕೆಲಸ ಮಾಡುತ್ತದೆ ಮತ್ತು ನಿಮ್ಮ ಚರ್ಮದಲ್ಲಿ ತೇವಾಂಶ ಇರುವಂತೆ ನೋಡಿ ಕೊಂಡು ನಿಮ್ಮ ತ್ವಚೆ ಯಾವಾಗಲು ತಾಜಾತನದಿಂದ ಕೂಡಿರುವ ಹಾಗೆ ಮಾಡುತ್ತದೆ.
ಇದರ ಜೊತೆಗೆ ಬಾದಾಮಿ ಎಣ್ಣೆಯಲ್ಲಿ ಕಂಡು ಬರುವ ವಿಟಮಿನ್ ಇ ನಿಮ್ಮ ತ್ವಚೆಯ ಸುಕ್ಕುಗಳನ್ನು ಹೋಗ ಲಾಡಿಸುತ್ತದೆ
ಪರಂಗಿ ಫೇಸ್‌ಪ್ಯಾಕ್
ಪರಂಗಿ ಹಣ್ಣಿನಲ್ಲಿ ಪಪ್ಪಾಯಿನ್ ಎನ್ನುವ ಅಂಶ ಇರುವ ಕಾರಣದಿಂದ ಚರ್ಮದ ಮೇಲಿನ ಸತ್ತ ಜೀವಕೋಶ ಗಳನ್ನು ತೆಗೆದುಹಾಕುವಲ್ಲಿ ಇದು ಕೆಲಸ ಮಾಡುತ್ತದೆ.ಇದರಿಂದ ಚರ್ಮ ಸಾಕಷ್ಟು ಎಲಾಸ್ಟಿಕ್ ಮತ್ತು ಗಟ್ಟಿಯಾಗುತ್ತದೆ. ಪರಂಗಿ ಹಣ್ಣಿನಲ್ಲಿ ಮೆಗ್ನೀಷಿಯಂ ಮತ್ತು ಫೋಲೆಟ್ ಸಹ ಇರು ವುದರಿಂದ ಆರೋಗ್ಯಕರ ವಾದ ಹಾಗೂ ಮೃದುವಾದ ತ್ವಚೆಗೆ ಇದು ಸಹಕಾರಿ