HEALTH | ನೀವು ಮೆಂಟಲ್ ಅಬ್ಯೂಸ್‌ಗೆ ಒಳಗಾಗುತ್ತಿದ್ದೀರಾ? ಇದನ್ನು ತಿಳಿಯೋದು ಹೀಗೆ..

ದೈಹಿಕ ಆರೋಗ್ಯ ಎಷ್ಟು ಮುಖ್ಯವೋ, ಮಾನಸಿಕ ಆರೋಗ್ಯವೂ ಅಷ್ಟೇ ಮುಖ್ಯ. ಕೆಲವೊಮ್ಮ ನೀವು ಮಾನಸಿಕ ನಿಂದನೆಗೆ ಒಳಗಾಗಿದ್ದರೂ ಅದು ಮಾನಸಿಕ ನಿಂದನೆ ಎನ್ನುವುದು ತಿಳಿಯೋದಿಲ್ಲ. ಮೆಂಟಲ್ ಅಬ್ಯೂಸ್ ಎಂದು ಯಾವಾಗ ಕರೆಯಬಹುದು ನೋಡಿ..

  • ಸ್ಟುಪಿಡ್, ಲೂಸರ್, ಹೀಗೆ ಹೆಸರುಗಳನ್ನು ಕರೆಯೋಕೆ ಆರಂಭಿಸೋದು, ಕರೆಯಬೇಡಿ ಎಂದಾಗಲೂ ನಿಲ್ಲಿಸದೇ ಇರೋದು.
  • ನಿಮ್ಮ ಕ್ಯಾರೆಕ್ಟರ್ ಬಗ್ಗೆ ಕೀಳಾಗಿ ಮಾತನಾಡೋದು, ಯಾವಾಗಲೂ ಹೀಗೆ ಮಾಡ್ತ್ಯ, ನೀನು ಇಂತವನೇ/ ಇಂತವಳೇ ಎಂದು ಹೇಳೋದು.
  • ನಿಮ್ಮ ಮೇಲೆ ಏರುದನಿಯಲ್ಲಿ ಕಿರುಚಾಡೋದು, ಬೈಗುಳಗಳನ್ನು ಹೇಳೋದು.
  • ನೀನು ಟ್ರೈ ಮಾಡ್ತಿದ್ದೀಯಾ ಆದ್ರೆ ಇದು ನಿನ್ನ ಬ್ರೈನ್ ಮೀರಿದ ವಿಷಯ, ನಿನಗೆ ಅರ್ಥ ಆಗೋದಿಲ್ಲ ಎಂದು ಕೀಳಾಗಿ ಕಾಣೋದು
  • ಬೇರೆಯವರ ಎದುರಿಗೆ, ಪಬ್ಲಿಕ್‌ನಲ್ಲಿ ನಿಮ್ಮ ಮೇಲೆ ಕೂಗೋದು, ನಿಮ್ಮ ಸೀಕ್ರೆಟ್ ಬೇರೆ ಅವರಿಗೆ ಹೇಳೋದು.
  • ನಿಮ್ಮ ಬಗ್ಗೆ ಮಾತನಾಡುವಾಗ ಅಟೆಂಶನ್ ನೀಡದೆ, ನೀನು ಮುಖ್ಯ ಅಲ್ಲ ಅನ್ನೋ ರೀತಿ ನಡೆದುಕೊಳ್ಳೋದು.
  • ನಿಮ್ಮ ಕೆಟ್ಟದಾಗಿ ಮಾತನಾಡೋದು, ಮಾತನಾಡಬೇಡಿ ಎಂದು ಹೇಳಿದರೆ ತಮಾಷೆಯನ್ನು ತಮಾಷೆಯಾಗಿ ತಗೊ ಎಂದು ಹೇಳೋದು
  • ನೋಡೋಕೆ ಹೇಗಿದ್ದೀಯಾ? ಹಲ್ಲು ಮುಂದೆ, ಕೂದಲು ಕಮ್ಮಿ ಹೀಗೆ ನಿಮ್ಮ ದೇಹದ ಬಗ್ಗೆ ಮಾತನಾಡೋದು.
  • ನೀವು ಯಾವುದರಲ್ಲಿ ಗೆದ್ದರೂ ಅದನ್ನು ಒಪ್ಪದೇ ಇರೋದು
  • ನಿಮ್ಮ ಆಸಕ್ತಿ ಬಗ್ಗೆ ಕೇರ್ ಮಾಡದೇ ಇರೋದು, ನೀವು ಹೇಳಿದ್ದನ್ನು ಲೆಕ್ಕಕ್ಕೆ ತೆಗೆದುಕೊಳ್ಳೋದು ಇರೋದು.
  • ನೀವು ಒಬ್ಬ ವ್ಯಕ್ತಿ ಎನ್ನುವ ಕನಿಷ್ಠ ಗೌರವವರೂ ಸಿಗದೇ ಇರೋದು.
  • ನಿಮ್ಮ ಎನರ್ಜಿ ಒಂದೇ ಸಲಕ್ಕೆ ಕುಗ್ಗಿ ಹೋಗುವಂತ ಚುಚ್ಚು ಮಾತುಗಳನ್ನು ಆಡೋದು.
    ಬೆದರಿಕೆ ಹಾಕೋದು
  • ನೀವು ಎಲ್ಲಿಗೆ ಹೋಗ್ತಿದ್ದೀರಿ, ಏನು ಮಾಡ್ತೀರಿ ಸದಾ ಕಣ್ಣಿಡೋದು.
  • ನಿಮ್ಮ ಪಾಸ್‌ವರ್ಡ್‌ಗಳನ್ನು ಪಡೆಯೋದು, ನಿಮ್ಮ ಫೋನ್ ಚೆಕ್ ಮಾಡೋದು.
  • ನಿಮ್ಮ ಜೀವನದ ಕಹಿ ಘಟನೆಯನ್ನು ಪದೆ ಪದೆ ನೆನಪಿಸಿ ಹಿಂಸೆ ನೀಡೋದು
  • ಎಲ್ಲ ನಿರ್ಧಾರಗಳನ್ನು ಒಬ್ಬರೇ ತೆಗೆದುಕೊಳ್ಳೋದು, ನೀವು ಲೆಕ್ಕಕ್ಕೇ ಇಲ್ಲ ಎನ್ನುವಂತೆ ಮಾಡೋದು.

ಈ ಎಲ್ಲ ಮಾಹಿತಿಯನ್ನು ಇಂಟರ್ನೆಟ್ ಆಧರಿಸಿ ಬರೆಯಲಾಗಿದೆ, ತೊಂದರೆಗಳು ಕಾಣಿಸಿದರೆ ವೈದ್ಯರನ್ನು ಸಂಪರ್ಕಿಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!