August 28, 2026
Friday, August 28, 2026
spot_img

ಇವತ್ತು ಏನಾದ್ರು ಸ್ವೀಟ್ ತಿನ್ಬೇಕು ಅಂತ ನಾಲಿಗೆ ಚಪ್ಪರಿಸ್ತಾ ಇದ್ಯಾ? ಹಾಗಿದ್ರೆ ಈ ರೆಸಿಪಿ ಟ್ರೈ ಮಾಡಿ

ಸ್ವೀಟ್ ಅಂಗಡಿಗೆ ಓಡೋದು, ಇಲ್ಲಾಂದ್ರೆ ಗಂಟೆಗಟ್ಟಲೆ ಒಲೆ ಮುಂದೆ ನಿಂತು ಹಾಲು ಕಾಯಿಸೋದೆಲ್ಲಾ ಬೇಡ. ಮನೆಯಲ್ಲೇ ಇರೋ ಗಟ್ಟಿ ಅವಲಕ್ಕಿ ತೆಗೀರಿ, ಹತ್ತೇ ಹತ್ತು ನಿಮಿಷದಲ್ಲಿ ಸೂಪರ್-ಡೂಪರ್ ‘ಅವಲಕ್ಕಿ ಪಾಯಸ’ ರೆಡಿ ಆಗುತ್ತೆ!

ಗಟ್ಟಿ ಅವಲಕ್ಕಿ: 1 ಕಪ್

ಬೆಲ್ಲ: 1 ಕಪ್

ಹಾಲು: 2 ರಿಂದ 3 ಕಪ್

ತುಪ್ಪ: 2-3 ಚಮಚ

ಗೋಡಂಬಿ, ದ್ರಾಕ್ಷಿ:

ಏಲಕ್ಕಿ ಪುಡಿ: 1 ಚಿಟಿಕೆ

ಪಾಯಸ ಮಾಡೋದು ಹೇಗೆ?

ಮೊದ್ಲು ಒಂದು ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ, ಅವಲಕ್ಕಿನ ಲೈಟಾಗಿ ಹುರಿದು ಪಕ್ಕಕ್ಕೆ ಎತ್ತಿಟ್ಟುಕೊಳ್ಳಿ. ಅದೇ ಬಾಣಲೆಗೆ ಇನ್ನೊಂದು ಚಮಚ ತುಪ್ಪ ಹಾಕಿ, ಗೋಡಂಬಿ-ದ್ರಾಕ್ಷಿನ ಚೆನ್ನಾಗಿ ಗೋಲ್ಡನ್ ಬ್ರೌನ್ ಆಗೋವರ್ಗೂ ಹುರಿದು ಪಕ್ಕಕ್ಕೆ ಇಡಿ.

ಈಗ ಒಂದು ಪಾತ್ರೆಗೆ ಹಾಲು ಹಾಕಿ ಕುದಿಯೋಕೆ ಬಿಡಿ. ಹಾಲು ಕುದಿ ಬಂದ್ಮೇಲೆ ಹುರಿದಿಟ್ಟ ಅವಲಕ್ಕಿ ಹಾಕಿ ಅದು ಮೆತ್ತಗಾಗೋವರ್ಗೂ 5 ನಿಮಿಷ ಬೇಯಿಸಿ. ಅವಲಕ್ಕಿ ಬೆಂದ್ಮೇಲೆ ಸಿಮ್‌ನಲ್ಲಿಟ್ಟು, ಬೆಲ್ಲ ಹಾಕಿ ಚನ್ನಾಗಿ ಕರಗಿಸಿ. ಬೆಲ್ಲ ಕರಗಿ ಪಾಯಸ ಗಟ್ಟಿಯಾಗ್ತಿದ್ದಂತೆ, ಏಲಕ್ಕಿ ಪುಡಿ ಆಗ್ಲೇ ಹುರಿದಿಟ್ಟ ಗೋಡಂಬಿ-ದ್ರಾಕ್ಷಿ ಹಾಕಿ ಮಿಕ್ಸ್ ಮಾಡಿದ್ರೆ.. ಆಹಾ! ಬಿಸಿ ಬಿಸಿ ಘಮಘಮಿಸೋ ಅವಲಕ್ಕಿ ಪಾಯಸ ಟೇಸ್ಟ್ ಮಾಡೋಕೆ ರೆಡಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !