ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ನವರು (Congress) ಹೇಳುತ್ತಾರೆ ಎನ್ಇಪಿ ಕೆಟ್ಟ ಶಿಕ್ಷಣ ನೀತಿ ಅಂತ. ಹಾಗಾದರೇ ನಿಮ್ಮ ಪ್ರಕಾರ ಉತ್ತಮವಾದ ಶಿಕ್ಷಣದ ನೀತಿ ಯಾವುದು. ಕುಲಪತಿಗಳನ್ನು ಮುಂದಿಟ್ಟುಕೊಂಡು ಎನ್ಇಪಿಯನ್ನು ರದ್ದು ಮಾಡಲು ಹೊರಟಿದ್ದಾರೆ. ರಾಜ್ಯದಲ್ಲಿ ಸೋನಿಯಗಾಂಧಿ ಶಿಕ್ಷಣ ನೀತಿಯನ್ನ ಜಾರಿ ಮಾಡುವುದಕ್ಕೆ ಹೊರಟಿದದ್ದೀರಾ? ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಮಾಡಲು ಸಾಧ್ಯವಿಲ್ಲ. ನಿಮ್ಮ ಬಳಿ ರಾಜ್ಯದ ಶಕ್ತಿ ಇರಬಹುದು. ಆದರೆ ಜನ ಶಕ್ತಿ ಒಂದಾದರೇ ಯಾವ ರಾಜ್ಯ ಶಕ್ತಿ ಉಳಿಯುವುದಿಲ್ಲ. ಮಕ್ಕಳಿಗೆ ನಿಮ್ಮ ನೀತಿಯ ಬಗ್ಗೆ ಅರ್ಥ ಆದರೆ ನಿಮ್ಮ ರಾಜ್ಯ ಶಕ್ತಿ ಉಳಿಯೊದಿಲ್ಲ ಎಂದರು.
ಅಧಿಕಾರಿ ಶಾಶ್ವಾತವಲ್ಲ.ಮುಂದಿನ ಚುನಾವಣೆಗಾಗಿ ಮಕ್ಕಳ ಶಿಕ್ಷಣದ ವ್ಯವಸ್ಥೆಯ ಜೊತೆ ಆಟ ಆಡಬೇಡಿ. ಸಾಮಾಜಿಕ ನ್ಯಾಯ ಹೋಗಬೇಕು ಅಂದರೇ ಜಾತಿ ರಾಜಕಾರಣ ಹೋಗಬೇಕು. ಆರ್ಥಿಕವಾಗಿ, ಶೈಕ್ಷಣಿಕವಾಗಿ, ಉದ್ಯೋಗಗಳು ದೊರೆಯುವಂತಗಬೇಕು. ಚುನಾವಣೆಯನ್ನು ಬಂಡವಾಳ ಮಾಡಿಕೊಂಡು ಶಿಕ್ಷಣವನ್ನು ದುರುಪಯೋಗ ಪಡಿಸಿಕೊಳ್ಳಬೇಡಿ ಎಂದರು.
ಕಾಂಗ್ರೆಸ್ ಆಡಳಿತವನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ. NEP ರದ್ದು ಮಾಡಿದ್ದಕ್ಕೆ ಆಶ್ಚರ್ಯವಾಗಿಲ್ಲ, ಅವರ ಮನಸ್ಥಿತಿ ಕಂಡು ಆಶ್ವರ್ಯವಾಗುತ್ತಿದೆ. ಸಾಧಕ, ಬಾಧಕಗಳನ್ನ ತಿಳಿಯುವುದಕ್ಕೂ ಮೊದಲೇ ಎನ್ಇಪಿ ರದ್ದು ಮಾಡಲು ಹೊರಟಿದ್ದಾರೆ. ನಿನ್ನೆ ನಡೆದ ಸಿಎಂ ಸಭೆಯಲ್ಲಿ ಸಾಕಷ್ಟು ಜನ ಶಿಕ್ಷಣ ತಜ್ಞರು ಇದ್ದರು. ಆ ತಜ್ಞರಲ್ಲಿ ಒಬ್ಬರೂ ಎನ್ಇಪಿ ರದ್ದತಿ ಬಗ್ಗೆ ಮಾತನಾಡಿಲ್ಲ ಎಂದು ತಿಳಿಸಿದರು.