ಫ್ಲವರ್‌ ಶೋ ನೋಡೋದಕ್ಕೆ ಹೊರಟಿದ್ದೀರಾ? ಸ್ಟ್ರಾಂಗ್‌ ಪರ್ಫ್ಯೂಮ್‌ ಹಾಕ್ಲೇಬೇಡಿ, ಯಾಕೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಿನ್ನೆಯಿಂದ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಆರಂಭವಾಗಿದೆ. ಮಹರ್ಷಿ ವಾಲ್ಮೀಕಿ ಹಾಗೂ ರಾಮಾಯಣ ಮಹಾಕಾವ್ಯ ವಿಷಯಾಧಾರಿತ 217 ನೇ ಫಲಪುಷ್ಪ ಪ್ರದರ್ಶನ ಇದಾಗಿದೆ.

ಈ ಬಾರಿಯ ಪ್ರದರ್ಶನಕ್ಕೆ ಸುಮಾರು 2.75 ಕೋಟಿ ರೂ. ಖರ್ಚು ಮಾಡಲಾಗಿದ್ದು, ಸುಮಾರು 10 ಲಕ್ಷ ಮಂದಿ ಆಗಮಿಸುವ ನಿರೀಕ್ಷೆಯಿದೆ. ಇನ್ನೂ ಈ ಉದ್ಯಾನವನದಲ್ಲಿರುವ ಮರಗಳಲ್ಲಿ ಅಲ್ಲಲ್ಲಿ ಜೇನುನೊಣಗಳು ಗೂಡು ಕಟ್ಟಿದ್ದು, ಈ ನಿಟ್ಟಿನಲ್ಲಿ ಫ್ಲವರ್‌ ಶೋ ನೋಡಲು ಬರುವವರು ದಯವಿಟ್ಟು ಸ್ಟ್ರಾಂಗ್‌ ಪರ್ಫ್ಯೂಮ್‌ ಹಾಕಿಕೊಂಡು ಬರಬೇಡಿ ಎಂದು ತೋಟಗಾರಿಕೆ ಇಲಾಖೆಯು ತಿಳಿಸಿದೆ.

ಪರ್ಫ್ಯೂಮ್‌ ವಾಸನೆ ಜೇನುನೊಣಗಳನ್ನು ಪ್ರಚೋದಿಸುವ ಸಾಧ್ಯತೆ ಇರುತ್ತವೆ. ಒಂದು ವೇಳೆ ಹೀಗೆ ಜೇನುನೊಣ ಪ್ರಚೋದನೆಗೆ ಒಳಗಾದರೆ ಅವುಗಳು ನಮ್ಮ ಮೇಲೆ ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಫ್ಲವರ್‌ ಶೋ ನೋಡಲು ಬರುವವರು ದಯವಿಟ್ಟು ಸ್ಟ್ರಾಂಗ್‌ ಪರ್ಫ್ಯೂಮ್‌ ಹಾಕೊಂಡು ಬರಬೇಡಿ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ. ಜೊತೆಗೆ ಫಲಪುಷ್ಪ ಪ್ರದರ್ಶನವನ್ನು ನೋಡಲು ಬರುವ ಸಂದರ್ಶಕರು ಸೆಂಟ್‌ ಹಾಕಿದ್ರೆ ಉದ್ಯಾನವನದಲ್ಲಿರುವ ಮರಗಳ ಹತ್ತಿರ ಹೋಗಲೇಬೇಡಿ ಎಂದು ಕೂಡಾ ತಿಳಿಸಿದೆ.

ಇಲಾಖಾ ಸಿಬ್ಬಂದಿಗಳು ಲಾಲ್‌ಬಾಗ್‌ ಉದ್ಯಾನವನದಲ್ಲಿರುವ ಒಂದಷ್ಟು ಜೇನು ಗೂಡುಗಳನ್ನು ತೆರವುಗೊಳಿಸಿದ್ದಾರೆ. ಆದರೆ ಮರದ ಮೇಲಿರುವ ಕೆಲವೊಂದಿಷ್ಟು ಜೇನುಗೂಡುಗಳನ್ನು ಹಾಗೆಯೇ ಬಿಡಲಾಗಿದೆ. ಹೀಗಾಗಿ ಉದ್ಯಾನವನದಲ್ಲಿ ಜೇನುನೊಣಗಳಿಂದ ಆಗಬಹುದಾದ ಸಂಭವನೀಯ ತೊಂದರೆಗಳನ್ನು ನಿರೀಕ್ಷಿಸಿ, ಇಲಾಖೆಯು ಆಂಟಿ-ವೆನಮ್‌ ಇಂಜೆಕ್ಷನ್‌ಗಳ ಜೊತೆಗೆ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳನ್ನು ಒಳಗೊಂಡ ತಾತ್ಕಾಲಿಕ ವೈದ್ಯಕೀಯ ಘಟಕವನ್ನು ಸಹ ಇಲ್ಲಿ ನಿಯೋಜಿಸಿದೆ. ಅಷ್ಟೇ ಅಲ್ಲದೆ ಫ್ಲವರ್‌ ಶೋಗೆ ಬರುವ ಸಂದರ್ಶಕರು ಮರಗಳ ಕೆಳಗೆ ಸಿಗರೇಟ್‌, ಬೀಡಿ ಸೇರಿದತೆ ಧೂಮಪಾನ ಮಾಡಬಾರದು. ಮತ್ತು ಜೇನುಗೂಡುಗಳಿಗೆ ಮೊಬೈಲ್‌ ಇತ್ಯಾದಿ ಟಾರ್ಚ್‌ ಲೈಟ್‌ಗಳನ್ನು ಹಾಕಬಾರದು ಎಂದು ಹೇಳಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!