HAIR LOSS | ಸಿಕ್ಕಾಪಟ್ಟೆ ಕೂದಲು ಉದುರುತ್ತಿದ್ಯಾ? ಇದನ್ನು ಗಂಭೀರವಾಗಿ ಪರಿಗಣಿಸಿ, ಕಾರಣ ಇಲ್ಲಿದೆ

ಮನೆಯ ಎಲ್ಲ ಮೂಲೆಗಳಲ್ಲಿ, ನಿಂತು ತಲೆ ಬಾಚಿದ ಜಾಗದಲ್ಲಿ, ಊಟದಲ್ಲಿ, ಹಾಸಿಗೆ ಮೇಲೆ, ಬಾತ್‌ರೂಮ್‌ನಲ್ಲಿ.. ಹೀಗೆ ಎಲ್ಲೆಂದರಲ್ಲಿ ಕೂದಲು ಕಾಣಿಸ್ತಿದ್ಯಾ? ಇದು ಸಿಂಪಲ್‌ ವಿಷಯ ಅಲ್ಲ. ಕೂದಲು ಉದುರೋದಕ್ಕೆ ಈ ಕಾರಣಗಳಿವೆ..

  • ಅನುವಂಶೀಯತೆ, ನಿಮ್ಮ ಪೋಷಕರಲ್ಲಿ ಕೂದಲು ಉದುರಿವಿಕೆ ಇದ್ದರೆ ನಿಮಗೂ ಬರುತ್ತದೆ.
  • ರೇಡಿಯೇಷನ್ ಥೆರಪಿ ಪಡೆಯುತ್ತದೆ ಕೂದಲು ಉದುರುತ್ತದೆ.
  • ಚೈಲ್ಡ್ ಬರ್ಥ್, ದೀರ್ಘಕಾಲದ ಅನಾರೋಗ್ಯದಿಂದಲೂ ಕೂದಲು ಉದುರುತ್ತದೆ.
  • ಕೂದಲಿಗೆ ಬಣ್ಣ ಹಾಕಿಸುವುದು, ಇನ್ಯಾವುದಾದರೂ ಕೆಮಿಕಲ್ ಹಾಕುವುದರಿಂದ ಸಮಯ ಕಳೆದಂತೆ ಕೂದಲು ಉದುರುವಿಕೆ ಆರಂಭವಾಗುತ್ತದೆ.
  • ಟೈಟ್ ಆದ ಹೇರ್‌ಸ್ಟೈಲ್‌ನ್ನು ವರ್ಷಾನುಗಟ್ಟಲೆ ಅನುಸರಿಸುವುದರಿಂದ ಉದುರುವಿಕೆ ಸಾಧ್ಯ.
  • ಹಾರ್ಮೋನಲ್ ಇಂಬ್ಯಾಲೆನ್ಸ್, ಪಿಸಿಒಡಿ, ಪಿಸಿಒಸ್ ಸಮಸ್ಯೆ ಇದ್ದವರಿಗೂ ಕೂದಲು ಉದುರುತ್ತದೆ.
  • ನೆತ್ತಿಯಲ್ಲಿ ಅಥವಾ ತಲೆಯ ಯಾವುದೇ ಭಾಗದಲ್ಲಿ ಇನ್ಫೆಕ್ಷನ್ ಆದರೆ ಆ ಜಾಗದಲ್ಲಿ ಕೂದಲು ಉದುರುತ್ತದೆ.
  • ಕೂದಲು ಎಳೆಯುವುದು, ಜೋರಾಗಿ ತಲೆ ಬಾಚುವುದು ತಪ್ಪು
  • ಲೈಂಗಿಕ ರೋಗಗಳಿಂದಲೂ ಕೂದಲು ಉದುರುತ್ತವೆ.
  • ಥೈರಾಯಿಡ್ ಸಮಸ್ಯೆ ಇದ್ದವರಿಗೂ ಕೂದಲು ಉದುರುವಿಕೆ ಜಾಸ್ತಿ
  • ದೇಹದಲ್ಲಿ ಬಯೋಟಿನ್, ಪ್ರೋಟಿನ್, ಐರನ್ ಹಾಗೂ ಝಿಂಕ್ ಇಲ್ಲದೆ ಹೋದರೂ ಕೂದಲು ಉದುರುತ್ತದೆ.
- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!