ಮೇಘನಾ ಶೆಟ್ಟಿ, ಶಿವಮೊಗ್ಗ
ಯಾರ ಹೊಟ್ಟೆಯಲ್ಲಿ ಜನ್ಮ ತಾಳುತ್ತೀರಿ ಅನ್ನೋದು ದೇವರ ಇಚ್ಛೆ ಆದರೆ ಯಾರನ್ನು ವರಿಸ್ತೀರಿ ಅನ್ನೋದು ನಿಮ್ಮದೇ ಆಯ್ಕೆ.
ಈ ವಿಷಯದಲ್ಲಿ ಲಕ್ ಮೇನ್ ಫ್ಯಾಕ್ಟರ್. ಪ್ರೀತಿಸಿದ ಹುಡುಗಿ ಮದುವೆಯಾದ ಮೇಲೆ ಸ್ಟ್ರಿಕ್ಟ್ ಹೆಂಡತಿಯಾಗಿ ಜಗಳ ಆಡ್ಬೋದು, ಅರೇಂಜ್ ಮದುವೆಯಾದ ಹುಡುಗಿ ಸಂಸಾರವನ್ನು ತೂಗಿಸೋ ಚಾಣಾಕ್ಷೆ ಆಗಿರಬಹುದು. ಅಥವಾ ಯಾರನ್ನೇ ಮದುವೆಯಾದರೂ ನಿಮ್ಮ ಜೀವನ ಚೆನ್ನಾಗಿಯೇ ಇರಬಹುದು, ಇಲ್ಲದೆಯೂ ಇರಬಹುದು.
ಎಲ್ಲವೂ ಲಕ್ ಅಷ್ಟೆ. ಮ್ಯಾಟ್ರಿಮೊನಿಯೋ, ಫ್ರೆಂಡಿನ ಫ್ರೆಂಡೋ, ಬ್ರೋಕರ್ ಅಂಕಲ್ ಚಾಯ್ಸ್, ನಿಮ್ಮದೇ ದೂರದ ನೆಂಟರೋ. ಯಾರಾದರೂ ಇರಲಿ, ಮದುವೆಯಾಗೋ ಮುನ್ನ ಈ ಅಂಶಗಳ ಬಗ್ಗೆ ಗಮನ ಇಡಿ..
ಕಂಪಾಟಿಬಲಿಟಿ ಇದೆಯಾ? ನಿಮ್ಮ ಇಂಟ್ರೆಸ್ಟ್ ಅವರ ಇಂಟ್ರೆಸ್ಟ್ ಹೊಂದಾಣಿಕೆ ಆಗುತ್ತದಾ? ನಿಮ್ಮ ನಂಬಿಕೆ ಅವರ ನಂಬಿಕೆ ಒಂದೆಯಾ? ಮಾತಾಡಿ ನೋಡಿ ತಿಳಿಯತ್ತೆ.
ಹುಡುಗ/ ಹುಡುಗಿಯನ್ನು ಅರ್ಥ ಮಾಡಿಕೊಳ್ಳೋಕೆ ಮುಖ್ಯವಾದ ಫ್ಯಾಕ್ಟರ್ ಅಂದ್ರೆ ಮಾತುಕತೆ, ಆಕೆ ಅಥವಾ ಅವನು ಮಾತೇ ಆಡೋದಿಲ್ಲ, ಎಕ್ಸ್‌ಪ್ರೆಸ್ ಮಾಡೋದಿಲ್ಲ ಅಂದ್ರೆ ಏನು ಮಾಡೋದು? ಕಮ್ಯುನಿಕೇಷನ್ ಇರುವ ಆಯ್ಕೆ ಮಾಡಿಕೊಳ್ಳಿ.
ದುಡ್ಡು ಮುಖ್ಯವಲ್ಲ ಅನ್ಬೇಡಿ, ಕಡಿಮೆ ಸಂಬಳ ಇರುವ ಹುಡುಗ/ಹುಡುಗಿಯ ಜಾತಕ, ಫೋಟೊವನ್ನು ಬ್ರೋಕರ್ ಕೂಡ ಮುಟ್ಟೋದಿಲ್ಲ. ಅವರ ಸಂಬಳ ಎಷ್ಟಿದೆ, ಸಾಲ ಎಷ್ಟಿದೆ, ಲೈಫ್‌ಸ್ಟ್ರೈಲ್ ಹೇಗಿದೆ? ಫಿನಾನ್ಷಿಯಲ್ ಸ್ಟೇಟಸ್ ಹೊಂದಾಣಿಕೆ ಆಗುತ್ತದಾ? ಯೋಚಿಸಿ..
ಫ್ಯಾಮಿಲಿ ಬ್ಯಾಕ್‌ಗ್ರೌಂಡ್ ಚೆಕ್ ಮಾಡಿ, ನಮ್ಮ ಮದುವೆಗಳಲ್ಲಿ ಬರೀ ವರ ಅಥವಾ ವಧುವಿನ ಮದುವೆಯಾಗೋದಿಲ್ಲ. ಎರಡು ಕುಟುಂಬಗಳ ನಡುವೆ ಮದುವೆಯಾಗುತ್ತದೆ. ಮನೆತನ, ಕುಟುಂಬದಂತೆ ವರ/ವಧು ಇರುತ್ತಾರೆ. ಅವರ ಬೆಳವಣಿಗೆ ಅಲ್ಲೇ ಅಲ್ವಾ ಆಗಿರೋದು?
ಮದುವೆ ಅಂದ್ಮೇಲೆ ಜಗಳ ಸಿಕ್ಕಾಪಟ್ಟೆ ಕಾಮನ್, ಇಪ್ಪತ್ತು, ಮೂವತ್ತು ವರ್ಷ ನೀವು ಬೇರೆ ಬೇರೆ ವಾತಾವರಣದಲ್ಲಿ ಬೆಳೆದು ಈಗ ಒಂದೇ ಮನೆಯಲ್ಲಿ ಸೆಟಲ್ ಆಗಬೇಕು ಎಂದರೆ ಮಿಸ್ ಅಂಡರ್ಸ್ಟಾಂಡಿಂಗ್ಸ್ ಮಾಮೂಲಿ. ಅದನ್ನು ಹೇಗೆ ಸಾಲ್ವ್ ಮಾಡ್ತಾರೆ? ಅಥವಾ ಕಿತ್ತಾಡಿ ರಂಪ ಮಾಡ್ತಾರಾ ಈಗಲೇ ಪರೀಕ್ಷಿಸಿ.
ಆಕೆ ಅಥವಾ ಅವನ ಲೈಫ್‌ಸ್ಟೈಲ್ ಹೇಗಿದೆ? ನೀವು ಬೆಳಗ್ಗೆ ಆರಕ್ಕೇ ಎದ್ದು ಆಕ್ಟೀವ್ ಆಗಿರಬಹುದು. ನಿಮ್ಮ ಪಾರ್ಟ್‌ನರ್ ಹತ್ತಕ್ಕೆ ಎದ್ದು ರೆಡಿಯಾಗಿ ಆಫೀಸ್‌ಗೆ ಹೋಗಬಹುದು. ಮೊದಲು ಮೊದಲು ಒಕೆ, ಆದರೆ ಬರುಬರುತ್ತಾ ಕಿರಿಕಿರಿ ಆಗುತ್ತದೆ.
ಇಬ್ಬರ ಧಾರ್ಮಿಕ ನಂಬಿಕೆ, ಕೆಲವು ಮುಖ್ಯವಾದ ವಿಷಯಗಳ ಬಗ್ಗೆ ಒಪಿನಿಯನ್, ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢವಾಗಿದ್ದಾರಾ? ಇವೆಲ್ಲವನ್ನೂ ಆಲೋಚಿಸಿ..
ಕೆಲವರು ಇಷ್ಟೆಲ್ಲಾ ಯೋಚನೆ ಮಾಡಿ ಮದುವೆಯಾಗಿದ್ದರೂ ಡಿವೋರ್ಸ್‌ಗಳಾಗಿವೆ. ಸುಖ ಸಂಸಾರಕ್ಕೆ ಯಾವುದೇ ಮ್ಯಾನುಯಲ್ ಇಲ್ಲ. ಪ್ರತೀ ಸಂಸಾರವೂ ವಿಭಿನ್ನವೇ. ಹೇಗೆ ತೂಗಿಸ್ಕೊಂಡು ಹೋಗ್ತೀರಿ ನಿಮಗೆ ಬಿಟ್ಟಿದ್ದು.