HEALTH | ಸಂಜೆ ವೇಳೆಗೆಲ್ಲಾ ಸುಸ್ತಾಗಿ ಹೋಗ್ತೀರಾ? ಕೆಲಸದ ಮಧ್ಯೆ ಹೀಗೆ ತಪ್ಪದೇ ಮಾಡಿ..

ಬೆಳಗ್ಗೆ ಕೆಲಸ ಆರಂಭಿಸಿ ಸಂಜೆ  ಕೆಲಸ ಮುಗಿಸುತ್ತೀರಿ. ಆದರೆ ಕೆಲಸ ಮುಗಿದ ನಂತರ ಕುಟುಂಬಕ್ಕೆ ಸಮಯ ಕೊಡೋದಕ್ಕೆ ಅಥವಾ ಹೊರಗೆ ಹೋಗೋದಕ್ಕೆ ಎನರ್ಜಿ ಇರೋದಿಲ್ಲ ಎನಿಸುತ್ತದೆಯಾ?

ಈ ರೀತಿ ನಿಮಗೂ ಆಗುತ್ತದಾ? ಇದಕ್ಕೆ ಮುಖ್ಯ ಕಾರಣ ನಮ್ಮ ದೇಹದ ಈ ಎರಡು ಭಾಗಗಳನ್ನು ಅತಿಯಾಗಿ ಬಳಸೋದು.. ಹೌದು, ಕಣ್ಣು ಹಾಗೂ ಬಾಯಿಯನ್ನು ಅತಿಯಾಗಿ ಬಳಸುವವರಿಗೆ ಸಂಜೆ ವೇಳೆಗೆ ಎನರ್ಜಿ ಇಲ್ಲದಂತಾಗುತ್ತದೆ.

ಇಡೀ ದಿನ ಕಂಪ್ಯೂಟರ್‌ ಸಂಬಂಧಿತ ಕೆಲಸ, ಅಥವಾ ಮಾತನಾಡುವ ಕೆಲಸ ಇದ್ದವರಿಗೆ ಸಂಜೆ ವೇಳೆ ಸುಸ್ತಾಗುತ್ತದೆ. ಇದಕ್ಕೆ ಈ ಒಂದು ಉಸಿರಾಟದ ವ್ಯಾಯಾಮ ಮಾಡಿ..

ದಿನಕ್ಕೆ ಎರಡು ಬಾರಿ ಮಧ್ಯಾಹ್ನ ೧೨ಕ್ಕೆ ಒಮ್ಮೆ ಹಾಗೂ ಸಂಜೆ ನಾಲ್ಕಕ್ಕೆ ಒಮ್ಮೆ ಹೀಗೆ ಮಾಡಿ..

ನಿಮ್ಮದೇ ಚೇರ್‌ನಲ್ಲಿ ನೇರವಾಗಿ ಕುಳಿತುಕೊಂಡು ದೀರ್ಘವಾಗಿ ಉಸಿರಾಡಿ. ಉಸಿರನ್ನು ಒಳಗೆ ಎಳೆದುಕೊಳ್ಳುವಾಗ ಕತ್ತನ್ನು ಮೇಲೆ ಎತ್ತಿ. ಉಸಿರನ್ನು ಬಾಯಿಯಿಂದ ಊದಿ, ಆಗ ಕುತ್ತಿಗೆ ಕೆಳಕ್ಕೆ ಬರಲಿ. ಹೀಗೆ ಹತ್ತು ಬಾರಿ ಮಾಡಿ. ವ್ಯತ್ಯಾಸ ನೋಡಿ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!