ಬ್ಯಾಚುಲರ್ಸ್‌ಗಾಗಿ ಅತಿ ಕಡಿಮೆ ಸಮಯದಲ್ಲಿ ಕುಕ್ಕರ್‌ನಲ್ಲೇ ಮಾಡಬಹುದಾದ ಇನ್‌ಸ್ಟಂಟ್ ಚಿಕನ್ ಪಲಾವ್ ರೆಸಿಪಿ ಇಲ್ಲಿದೆ. ಯಾರುಬೇಕಾದರು ಸುಲಭವಾಗಿ ಈ ರೆಸಿಪಿಯನ್ನು ಮಾಎಬಹುದು.
ಬೇಕಾಗುವ ಸಾಮಗ್ರಿಗಳು:
ಬಾಸ್ಮತಿ ಅಥವಾ ಜೀರಾ ರೈಸ್
ಚಿಕನ್
ಈರುಳ್ಳಿ
ಟೊಮೆಟೊ
ಹಸಿ ಮೆಣಸಿನಕಾಯಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಪುದೀನಾ ಮತ್ತು ಕೊತ್ತಂಬರಿ ಸೊಪ್ಪು
ಮೊಸರು
ಪಲಾವ್ ಎಲೆ
ಚಕ್ಕೆ
ಲವಂಗ
ಏಲಕ್ಕಿ
ಗರಂ ಮಸಾಲಾ ಪುಡಿ
ತುಪ್ಪ ಅಥವಾ ಎಣ್ಣೆ
ಉಪ್ಪು ಮತ್ತು ಅರಿಶಿನ
ಮಾಡುವ ವಿಧಾನ:
ಕುಕ್ಕರ್‌ನಲ್ಲಿ ಎಣ್ಣೆ ಮತ್ತು ತುಪ್ಪವನ್ನು ಬಿಸಿ ಮಾಡಿ. ಅದಕ್ಕೆ ಪಲಾವ್ ಎಲೆ, ಚಕ್ಕೆ, ಲವಂಗ ಮತ್ತು ಏಲಕ್ಕಿ ಹಾಕಿ ಲಘುವಾಗಿ ಹುರಿದು, ಅದಕ್ಕೆ ಹೆಚ್ಚಿದ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಹಾಕಿ ಗೋಲ್ಡನ್ ಬಣ್ಣ ಬರುವವರೆಗೆ ಹುರಿಯಿರಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ 1 ನಿಮಿಷ ಕೈಯಾಡಿಸಿ. ನಂತರ ಪುದೀನಾ, ಕೊತ್ತಂಬರಿ ಸೊಪ್ಪು ಮತ್ತು ಟೊಮೆಟೊ ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಚೆನ್ನಾಗಿ ಬಾಡಿಸಿಕೊಂಡು, ತೊಳೆದ ಚಿಕನ್, ಸ್ವಲ್ಪ ಅರಿಶಿನ, ಗರಂ ಮಸಾಲಾ, ಮೊಸರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ, ಮುಚ್ಚಳ ಮುಚ್ಚದೆ 5 ನಿಮಿಷ ಮೀಡಿಯಂ ಉರಿಯಲ್ಲಿ ಬೇಯಲು ಬಿಟ್ಟು, ಈಗ 2 ಕಪ್ ಅಕ್ಕಿಗೆ 3.5 ಕಪ್ ನೀರನ್ನು ಕುಕ್ಕರ್‌ಗೆ ಸುರಿದು ಚೆನ್ನಾಗಿ ಕುದಿಸಿ. ನೀರು ಕುದಿಯಲು ಆರಂಭಿಸಿದಾಗ ನೆನೆಸಿಟ್ಟ ಅಕ್ಕಿಯನ್ನು ಹಾಕಿ ನಿಧಾನವಾಗಿ ಕೈಯಾಡಿಸಿ. ಕುಕ್ಕರ್ ಮುಚ್ಚಳ ಮುಚ್ಚಿ ಮೀಡಿಯಂ ಉರಿಯಲ್ಲಿ ಕೇವಲ 2 ಸೀಟಿ ಕೂಗಿಸಿದರೆ, ಬಿಸಿಬಿಸಿ ಚಿಕನ್ ಪಲಾವ್ ಸಿದ್ದ.



