ರಕ್ಷಾಬಂಧನಕ್ಕೆ ಅಣ್ಣ ಅಥವಾ ತಮ್ಮನಿಗೆ ರಾಖಿ ಕಟ್ಟೋಕೆ ಎಷ್ಟು ಖುಷಿಯೋ ಹಾಗೇ ಅವರಿಂದ ಗಿಫ್ಟ್ ತೆಗೆದುಕೊಳ್ಳೋದು ಅಂದ್ರೆ ಏನೋ ಖುಷಿ. ಲಕ್ಷ ಲಕ್ಷ ಸಂಬಳ ಬಂದರೂ ಸಹೋದರರಿಂದ ಬರುವ ಗಿಫ್ಟ್‌ಗಳ ಬೆಲೆಯೇ ಬೇರೆ.. ನಿಮ್ಮ ಸಹೋದರಿಗೆ ಈ ರೀತಿ ಗಿಫ್ಟ್ ನೀಡಿ..
ಪರ್ಸನಲೈಸ್ಡ್ ಜ್ಯುವೆಲರಿ: ಆಕೆಗೆ ಇಷ್ಟವಾಗುವ ಪರ್ಸನಲೈಸ್ಡ್ ಜ್ಯುವೆಲರಿ, ಬ್ರೇಸ್‌ಲೈಟ್, ಸರ ಅಥವಾ ಬಳೆಯ ಮೇಲೆ ಅವಳ ಹೆಸರಿರಲಿ ಅಥವಾ ನೀವು ಕರೆಯುವ ನಿಕ್ ನೇಮ್ ಹಾಕಿಸಿ ಕೊಡಿ.
ಸ್ಪಾ ಅಥವಾ ಬ್ಯೂಟಿ ಪಾರ್ಲರ್ ವೋಚರ್ಸ್: ಹೆಣ್ಣುಮಕ್ಕಳಿಗೆ ಸಿಂಗಾರ ಅನ್ನೋದು ಇಷ್ಟ ಹಾಗಾಗಿ ನಿಮ್ಮ ಕೂಪನ್ಸ್ ಅವರಿಗೆ ಇಷ್ಟವಾಗುತ್ತದೆ.
ಇಯರಿಂಗ್ಸ್, ಬಳೆಗಳು, ಬ್ಯಾಂಡ್ಸ್, ಕಸ್ಟಮೈಸ್ಡ್ ಕಾಫಿ ಮಗ್ಸ್ ನೀಡಬಹುದು. ನಿಮ್ಮ ಬಜೆಟ್ ಹೆಚ್ಚಿದ್ದರೆ ಫೋನ್, ವಾಚ್, ಸ್ಕೂಟಿ, ಗೋಲ್ಡ್ ಕೂಡ ಕೊಡಿಸಬಹುದು.
ನಿಮ್ಮ ಅವಳ ನೆನಪಿನ ಆಲ್ಬಮ್ ಅಥವಾ ಫೋಟೊಫ್ರೇಮ್ ಕೊಡಿ. ಜೊತೆಗೆ ಅವಳೆಷ್ಟು ಇಷ್ಟ ಅನ್ನೋ ಸಿಂಪಲ್ ಲೆಟರ್ ಬರೆದುಕೊಡಿ.
ಬಜೆಟ್ ಜಾಸ್ತಿ ಇದ್ರೆ ಅವಳ ಜೊತೆ ಟ್ರಿಪ್ ಪ್ಲಾನ್ ಮಾಡಿ. ನಿಮಗೆ ಸಮಯ ಇಲ್ಲವಾದರೆ ಅವಳ ಸ್ನೇಹಿತರ ಜೊತೆ ಟ್ರಿಪ್ ಪ್ಲಾನ್ ಮಾಡಿ ಕೊಡಿ.